Download Our App

Follow us

Home » ರಾಜಕೀಯ » ಕುಮಾರಸ್ವಾಮಿ ವಿರುದ್ಧ ಕ್ಯಾಬಿನೆಟ್​ನಲ್ಲೇ ಕಾಂಗ್ರೆಸ್​ ಖೆಡ್ಡಾ ತೋಡಿದೆ – ಹೆಚ್​.ಕೆ ಪಾಟೀಲ್..!

ಕುಮಾರಸ್ವಾಮಿ ವಿರುದ್ಧ ಕ್ಯಾಬಿನೆಟ್​ನಲ್ಲೇ ಕಾಂಗ್ರೆಸ್​ ಖೆಡ್ಡಾ ತೋಡಿದೆ – ಹೆಚ್​.ಕೆ ಪಾಟೀಲ್..!

ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಮಹತ್ವದ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಇಂದಿನ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಮುಂದೆ ಬಾಕಿ ಇರುವ ಪ್ರಾಸಿಕ್ಯೂಷನ್​ ಮನವಿ ಬಗ್ಗೆ ಮಹತ್ವದ ಚರ್ಚೆ ನಡೆದಿದೆ. ಬಾಕಿ ಇರುವ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವ ಬಗ್ಗೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕ್ಯಾಬಿನೆಟ್​ ಸಭೆ ಬಳಿಕ ಸಚಿವ ಹೆಚ್​.ಕೆ ಪಾಟೀಲ್ ಮಾತನಾಡಿ, ಕುಮಾರಸ್ವಾಮಿ ಪ್ರಾಸಿಕ್ಯೂಷನ್​ ಫೈಲ್​​ ಕ್ಲಿಯರ್​ ಮಾಡಿ, ರಾಜ್ಯಪಾಲರಿಗೆ ಸಲಹೆ ನೀಡಲು ಕ್ಯಾಬಿನೆಟ್​ ನಿರ್ಣಯ ಮಾಡಿದೆ. ಕುಮಾರಸ್ವಾಮಿ ವಿರುದ್ಧ ಕ್ಯಾಬಿನೆಟ್​ನಲ್ಲೇ ಕಾಂಗ್ರೆಸ್​ ಖೆಡ್ಡಾ ತೋಡಿದೆ, HDK ಸೇರಿ ಪ್ರಾಸಿಕ್ಯೂಷನ್​ ಬಾಕಿ ಕೇಸ್​ಗಳ ಇತ್ಯರ್ಥಕ್ಕೆ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ.

HDK, ನಿರಾಣಿ, ರೆಡ್ಡಿ, ಶಶಿಕಲಾ ಜೊಲ್ಲೆ ಕೇಸ್​ಗಳ ಇತ್ಯರ್ಥಕ್ಕೆ ಸಲಹೆ ನೀಡಿದೆ, ಬಾಕಿ ಉಳಿದ ಪ್ರಕರಣಗಳಿಗೆ ಅನುಮೋದನೆ ಕೊಡಬೇಕು. ಸಚಿವ ಸಂಪುಟದಲ್ಲಿ ಅಪ್ರೂವಲ್​​ ಕೂಡ ಆಗಿದೆ, ಅನುಮೋದನೆ ಹಾಗೂ ಪೂರ್ವ ಅನುಮೋದನೆ ನೀಡಲು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ನಾಲ್ಕರಲ್ಲಿ 2 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ, ಈ ಹಿನ್ನೆಲೆ ನಾಲ್ವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಣಯ ಮಾಡಿದೆ ಎಂದು ಹೆಚ್​.ಕೆ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ : ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ಆ.27ಕ್ಕೆ ಮುಂದೂಡಿಕೆ..!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ..!

ದೇಶದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್​ನ ಭುಜ್​-ಅಹ್ಮದಾಬಾದ್​ ನಡುವೆ ವಂದೇ ಭಾರತ್​ ಮೆಟ್ರೋ ಸಂಚಾರ ಮಾಡಲಿದೆ. 100-250

Live Cricket

Add Your Heading Text Here