ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಮ್ಮ ಮೊದಲನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 14, 2021 ರಲ್ಲಿ ಮದುವೆಯಾಗಿದ್ದ ಈ ಜೋಡಿ, ಮದುವೆಯಾಗಿ ಮೂರು ವರ್ಷಗಳ ನಂತರ ತಮ್ಮ ಮೊದಲನೆಯ ಮಗುವಿಗೆ ಜನ್ಮ ನೀಡಿದ್ದಾರೆ.
ಮಿಲನಾ ನಾಗರಾಜ್ ಅವರು ತಾಯಿ ಆಗಿದ್ದಾರೆ. ಈ ಖುಷಿ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮಿಲನಾ ನಾಗರಾಜ್ ಅವರಿಗೆ ಹೆಣ್ಣುಮಗು ಜನಿಸಿದ್ದು, ಈ ವಿಚಾರವನ್ನು ದಂಪತಿ ರಿವೀಲ್ ಮಾಡಿದ್ದಾರೆ.
ಮಗು ಹಾಗೂ ತಾಯಿಯ ಆರೋಗ್ಯ ಉತ್ತಮವಾಗಿದೆ ಎಂದು ಡಾರ್ಲಿಂಗ್ ಕೃಷ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮಿಲನಾ ನಾಗರಾಜ್ ಅವರನ್ನು ಡಾರ್ಲಿಂಗ್ ಕೃಷ್ಣ ಅವರು ಹೊಗಳಿದ್ದಾರೆ. ಅದೇ ರೀತಿ ಮಗಳು ಹುಟ್ಟಿದ್ದಕ್ಕೆ ಡಾರ್ಲಿಂಗ್ ಕೃಷ್ಣ ಅವರಿಗೆ ಸಾಕಷ್ಟು ಖುಷಿ ಆಗಿದೆ. ಹೆಣ್ಣು ಮಗು ಜನಿಸಬೇಕು ಎಂದು ಅವರ ಆಸೆ ಆಗಿತ್ತಂತೆ. ಈ ಆಸೆ ಈಡೇರಿದೆ. ಇನ್ನು ದಂಪತಿಗೆ ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ.
ಇದನ್ನೂ ಓದಿ : ಪ್ರವೀಣ್ ತೇಜ್-ಅಂಜಲಿ ಅನಿಶ್ ನಟನೆಯ ‘ಜಂಬೂ ಸರ್ಕಸ್’ ಚಿತ್ರದ ಟ್ರೈಲರ್ ರಿಲೀಸ್..!