ನವದೆಹಲಿ : ದೆಹಲಿಯ ರೋಹಿಣಿಯಲ್ಲಿರುವ ಸಿಆರ್‌ಪಿಎಫ್ ಶಾಲೆಯ ಹೊರಗೆ ಇಂದು ಬೆಳ್ಳಂಬೆಳಗ್ಗೆ ಸ್ಫೋಟ ಸಂಭವಿಸಿದೆ. ಯಾವುದೇ ದೊಡ್ಡ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇಲ್ಲಿಯವರೆಗೆ ಯಾವುದೇ ಬೆಂಕಿ ಅಥವಾ ಹಾನಿ ಕಂಡುಬಂದಿಲ್ಲ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ 7.40ರ ಸುಮಾರಿಗೆ ನವದೆಹಲಿಯ ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸಿಆರ್‌ಪಿಎಫ್ ಶಾಲೆಯ ಹೊರಗೆ ಸ್ಫೋಟ ಸಂಭವಿಸಿದ್ದು, ಬೆಳಗ್ಗೆ 7:50ರ ಸುಮಾರಿಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ಎರಡು ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ದೌಡಾಯಿಸಿದೆ.
ಅಗ್ನಿಶಾಮಕ ದಳದ ಪ್ರಕಾರ, ಇದುವರೆಗೆ ಯಾವುದೇ ಬೆಂಕಿ ಅಥವಾ ಗೋಡೆಗೆ ಹಾನಿಯಾದ ವರದಿಯಾಗಿಲ್ಲ. ತಂಡವು ಪ್ರದೇಶದಲ್ಲಿ ಶೋಧವನ್ನೂ ನಡೆಸುತ್ತಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ರಾಜಸ್ಥಾನದಲ್ಲಿ ಆಟೋ-ಬಸ್ ನಡುವೆ ಭೀಕರ ಅಪಘಾತ.. 12ಕ್ಕೂ ಹೆಚ್ಚು ಮಂದಿ ಸಾವು..!
Post Views: 49