ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಪಿ ಅರ್ಜುನ್ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ. ಆದರೆ ಯೂಟ್ಯೂಬರ್ ಸುಧಾಕರ್ ಎಂಬಾತ ಮಾರ್ಟಿನ್ ಸಿನಿಮಾ ಚೆನ್ನಾಗಿಲ್ಲ, ಕಥೆ ಚೆನ್ನಾಗಿಲ್ಲ ಅಂತಾ ವಿಡಿಯೋ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಧ್ರುವ ಸರ್ಜಾ ಫ್ಯಾನ್ಸ್ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದರು.
ಮಾದನಾಯಕನಹಳ್ಳಿ ಸ್ಟೇಷನ್ಗೆ ದೂರು ನೀಡಿದ ಬಳಿಕ ಸುಧಾಕರ್ನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಪೊಲೀಸರ ವಿಚಾರಣೆ ವೇಳೆ ಯುಟ್ಯೂಬರ್ ಸುಧಾಕರ್ ತಪ್ಪೊಪ್ಪಿಕೊಂಡು, ನನ್ನಿಂದ ತಪ್ಪಾಗಿದೆ ಅಂತಾ ಅಪಾಲಜಿ ಲೆಟರ್ ಬರೆದುಕೊಟ್ಟಿದ್ದ.
ನಂತರ ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಡಿಲೀಟ್ ಮಾಡಿಸಿದ್ದರು. ಆದ್ರೆ, ಯೂಟ್ಯೂಬರ್ ಸುಧಾಕರ್ ಇದೀಗ ಹಲ್ಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾನೆ.
ಇದನ್ನೂ ಓದಿ : ರಾಯಚೂರು : ಆಟವಾಡುತ್ತಿದ್ದ ಮಕ್ಕಳ ಮೇಲೆ ಉರುಳಿ ಬಿದ್ದ ಕಲ್ಲು ಬಂಡೆ – ಇಬ್ಬರು ಮಕ್ಕಳು ಸಾವು..!
Post Views: 6,397