ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ರುತ್ ಪ್ರಭು ಅನೇಕ ಕಷ್ಟಗಳನ್ನು ಎದುರಿಸಿದರು. ಆರೋಗ್ಯ ಸಮಸ್ಯೆಯಿಂದಾಗಿ ಕೆಲ ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದ ಸಮಂತಾ ಸದ್ಯ ಸರಣಿ ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ಇತ್ತೀಚಿಗಷ್ಟೇ ಸಮಂತಾ ಮಾಜಿ ಪತಿ ನಾಗ ಚೈತನ್ಯ ಅವರು ನಟಿ ಶೋಭಿತಾ ಜೊತೆ ಎರಡನೇ ಮದುವೆಯಾದರು. ಇದೀಗ ಸಮಂತಾ ಕೂಡ ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಅನ್ನೊ ಸುದ್ದಿ ಹರಿದಾಡುತ್ತಿದೆ.
ಹೌದು, ಸಮಂತಾ ರುತ್ ಪ್ರಭು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ 2025ರ ರಾಶಿ ಭವಿಷ್ಯ ಹೇಗಿರುತ್ತೆ ಎಂಬ ಫೋಟೋ ಹಂಚಿಕೊಂಡಿದ್ದಾರೆ. 2025ರಲ್ಲಿ ತಮ್ಮ ರಾಶಿಫಲ ಏನಿದೆ ಎಂಬುದನ್ನು ಈ ಪೋಸ್ಟ್ ವಿವರಿಸುತ್ತಿದೆ. ಸಮಂತಾ ಅವರದ್ದು ವೃಷಭ ರಾಶಿ. ಈ ರಾಶಿಯವರು 2025ರ ವರ್ಷದಲ್ಲಿ ಏನನ್ನೆಲ್ಲ ನಿರೀಕ್ಷೆ ಮಾಡಬಹುದು ಎಂಬ ಪಟ್ಟಿಯನ್ನು ಸಮಂತಾ ಹಂಚಿಕೊಂಡು, ‘ಹಾಗೆಯೇ ಆಗಲಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಮದುವೆ ಮತ್ತು ಮಕ್ಕಳ ಬಗ್ಗೆ ಇದರಲ್ಲಿ ಸೂಚನೆ ಇದೆ.
‘ನಿಮಗೆ ನಿಷ್ಠಾವಂತ ಮತ್ತು ಪ್ರೀತಿಯ ಬಾಳಸಂಗಾತಿ ಸಿಗಲಿದ್ದಾರೆ. ಮಕ್ಕಳನ್ನು ಪಡೆಯಲಿದ್ದೀರಿ’ ಎಂಬ ಸಾಲುಗಳು ರಾಶಿ ಫಲದಲ್ಲಿ ಇದೆ. ಇದನ್ನು ಸಮಂತಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವುದರಿಂದ ಬರುವ ವರ್ಷ ಅವರು ಮದುವೆ ಮತ್ತು ಮಗು ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.
‘2025ರ ವರ್ಷ ನೀವು ತುಂಬ ಬ್ಯುಸಿ ಆಗಿರಲಿದ್ದೀರಿ. ಕೌಶಲ ವೃದ್ಧಿ ಆಗಲಿದ್ದು, ಅದರಿಂದ ನಿಮಗೆ ಹೆಚ್ಚಿನ ಆದಾಯ ಬರಲಿದೆ. ಆರ್ಥಿಕ ಸ್ಥಿರತೆ ಸಿಗಲಿದೆ. ಹಲವು ವರ್ಷಗಳಿಂದ ಇಟ್ಟುಕೊಂಡಿದ್ದ ಗುರಿಯನ್ನು ಸಾಧಿಸುತ್ತೀರಿ. ಆದಾಯದ ಮೂಲಗಳು ಹೆಚ್ಚಲಿವೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸಲಿದೆ’ ಎಂಬ ಸಾಧ್ಯತೆಗಳನ್ನು ಕೂಡ ಸಮಂತಾ ಅವರ ರಾಶಿಫಲದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ : ಸೋನು ನಿಗಮ್ ಧ್ವನಿಯಲ್ಲಿ “ರಿಚ್ಚಿ” ಚಿತ್ರದ ಹಾಡು..!