Download Our App

Follow us

Home » ಅಪರಾಧ » ಮಂಗಳೂರು : ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಪಶುವೈದ್ಯನಿಂದ ಹಲ್ಲೆ- ವ್ಯಕ್ತಿ ಸ್ಥಳದಲ್ಲೇ ಸಾವು..!

ಮಂಗಳೂರು : ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಪಶುವೈದ್ಯನಿಂದ ಹಲ್ಲೆ- ವ್ಯಕ್ತಿ ಸ್ಥಳದಲ್ಲೇ ಸಾವು..!

ಮಂಗಳೂರು : ಮಂಗಳೂರಿನಲ್ಲಿ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೆ ಪಶು ವೈದ್ಯಾಧಿಕಾರಿ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ವ್ಯಕ್ತಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಜೋಡುಮಾರ್ಗ ಸರ್ಕಲ್​​​ನಲ್ಲಿ ಘಟನೆ ನಡೆದಿದೆ. 58 ವರ್ಷದ ಕೊಕ್ಕಡ‌ ನಿವಾಸಿ ಕೃಷ್ಣ ಯಾನೆ ಕಿಟ್ಟ ಮೃತ ದುರ್ದೈವಿ.

ಕೃಷ್ಣ ಅವರು ವಿಪರೀತ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡದ್ದರಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೊಕ್ಕಡಕ್ಕೆ ಬಂದಿದ್ದಾರೆ. ಈ ಸಂದರ್ಭ ತನ್ನ ಪರಿಚಿತರೇ ಆದ ಕೊಕ್ಕಡದ ಪಶು ವೈದ್ಯ ಡಾ| ಕುಮಾರ್‌ ಅವರು ಕೃಷ್ಣ ಅವರಲ್ಲಿ ಮಾತನಾಡುತ್ತ ಜ್ವರ ಇದ್ದು ಇಷ್ಟು ಬೇಗ ಆಸ್ಪತ್ರೆಯಿಂದ ಯಾಕೆ ಬಂದೆ ಎಂದು ಒಂದು ಏಟು ಹೊಡೆದಿದ್ದಾರೆ.

ಇನ್ನು ಪಶು ವೈದ್ಯರು ಹೊಡೆದ ರಭಸಕ್ಕೆ ಕೃಷ್ಣ ಅವರು ಸ್ಥಳದಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ. ಈ ಸಂಬಂಧ ಮೃತ ಕೃಷ್ಣ ಪತ್ನಿ ಭಾರತಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಧರ್ಮಸ್ಥಳ ಠಾಣಾ ಪೊಲೀಸರು ಆರೋಪಿ ಪಶು ವೈದ್ಯ ಕುಮಾರ್​​ನನ್ನು ಬಂಧಿಸಿದ್ದಾರೆ. ಇನ್ನು ಮೃತ ಕೃಷ್ಣ ಕೊಕ್ಕಡ ಭಾಗದಲ್ಲಿ ರೀಲ್ಸ್​ ಮಾಡ್ತಾ ಹೆಚ್ಚು ಫೇಮಸ್ ಆಗಿದ್ರು.

ಇದನ್ನೂ ಓದಿ : ‘ಶಿವಶರಣ ಮೋಳಿಗೆ ಮಾರಯ್ಯ’ ಸಿನಿಮಾಕ್ಕೆ ಕೊಪ್ಪಳ ಶ್ರೀಗವಿ ಸಿದ್ದೇಶ್ವರ ಮಠದ ಶ್ರೀಗಳಿಂದ ಚಾಲನೆ..!

Leave a Comment

RELATED LATEST NEWS

Top Headlines

ಪಠಾಣ್​ ಸಿನಿಮಾಗೆ ಸೆಡ್ಡು ಹೊಡೆದ ಕೆಡಿ : ದುಬಾರಿ ಮೊತ್ತಕ್ಕೆ ಚಿತ್ರದ ಆಡಿಯೋ ರೈಟ್ಸ್ ಸೇಲ್..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾದ ರಿಲೀಸ್ ಡೇಟ್​​ನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಅದರ ಬೆನ್ನಲೇ ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಬಿಡುಗಡೆ ಬಗ್ಗೆ

Live Cricket

Add Your Heading Text Here