ಮಂಡ್ಯ : ನೀರಿನ ಟ್ಯಾಂಕ್‌ಗೆ ನೇಣು ಬಿಗಿದುಕೊಂಡು ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕುರಿದೊಡ್ಡಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಜ್ಞಾನೇಶ್ (30) ಮೃತ ಇಂಜಿನಿಯರ್.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹೆಮ್ಮತ್ತಿ ಗ್ರಾಮದ ನಿವಾಸಿಯಾದ ಈತ, ಕಳೆದ ಹಲವು ವರ್ಷಗಳಿಂದ ಕೆಸ್ತೂರು ಗ್ರಾಮದಲ್ಲಿ ವಾಸವಾಗಿದ್ದ. ಮೃತ ಜ್ಞಾನೇಶ್ ಶಿಂಷಾ ಏತ ನೀರಾವರಿ ಯೋಜನೆಯ ಬಾಪೂಜಿ ಕನ್ಸ್ಟ್ರಕ್ಷನ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.
ಜ್ಞಾನೇಶ್ ಆತ್ಮಹತ್ಯೆಗೆ ಇನ್ನು ನಿಖರ ಕಾರಣ ತಿಳಿದು ಬಂದಿಲ್ಲ. ಆತ್ಮಹತ್ಯೆಗೂ ಮುನ್ನ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ʼWork Pressureʼ ಎಂದು ಹಾಕಿಕೊಂಡಿದ್ದ. ಈ ಹಿನ್ನೆಲೆ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಹೆಂಡತಿ, ಮಾವನ ಕಿರುಕುಳಕ್ಕೆ ಬೇಸತ್ತು ಹೆಡ್ ಕಾನ್ಸ್‌ಟೇಬಲ್ ಸೂಸೈಡ್..!