Download Our App

Follow us

Home » ಸಿನಿಮಾ » ಝೈದ್‌ ಖಾನ್‌ ‘ಕಲ್ಟ್‌’ ಸಿನಿಮಾಕ್ಕೆ ಉಪಾಧ್ಯಕ್ಷ ನಾಯಕಿ ಮಲೈಕಾ ವಸುಪಾಲ್‌ ಎಂಟ್ರಿ – ರಚಿತಾ ರಾಮ್ ಇದ್ರೂ ಇವರ್ಯಾಕೆ ಗೊತ್ತಾ?

ಝೈದ್‌ ಖಾನ್‌ ‘ಕಲ್ಟ್‌’ ಸಿನಿಮಾಕ್ಕೆ ಉಪಾಧ್ಯಕ್ಷ ನಾಯಕಿ ಮಲೈಕಾ ವಸುಪಾಲ್‌ ಎಂಟ್ರಿ – ರಚಿತಾ ರಾಮ್ ಇದ್ರೂ ಇವರ್ಯಾಕೆ ಗೊತ್ತಾ?

ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಅನೇಕರು ಇಂದು ಬೆಳ್ಳಿತೆರೆಯಲ್ಲಿ ಬದುಕು ರೂಪಿಸಿಕೊಂಡಿದ್ದಾರೆ. ಆ ಸಾಲಿಗೆ ಇದೀಗ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಎಡವಟ್ಟು ರಾಣಿ ಲೀಲಾ ಆಗಿ ನಟಿಸಿ ಸೈ ಎನಿಸಿಕೊಂಡಿರುವ ಬೆಡಗಿ ಮಲೈಕಾ ವಸುಪಾಲ್ ಸೇರ್ಪಡೆಯಾಗಿದ್ದಾರೆ. ಮೊದಲ ಧಾರಾವಾಹಿಯಲ್ಲೇ ಅದ್ಭುತ ನಟನೆಯ ಮೂಲಕ ಮೋಡಿ ಮಾಡಿರುವ ಈ ಚೆಲುವೆ ಇದೀಗ ‘ಬನಾರಸ್’ ಹೀರೋ ಝೈದ್ ಖಾನ್ ನಟನೆಯ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

‘ಉಪಾಧ್ಯಕ್ಷ’ ಸಿನಿಮಾದ ನಾಯಕಿ ಮಲೈಕಾ ವಸುಪಾಲ್‌ ಇದೀಗ ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಸಿನಿಮಾ ಟೀಮ್‌ ಸೇರಿಕೊಂಡಿದ್ದಾರೆ.  ಅನಿಲ್‌ ಕುಮಾರ್‌ ನಿರ್ದೇಶನದ ಈ ಸಿನಿಮಾದಲ್ಲಿ ಎರಡು ಶೇಡ್‌ ಇರುವ ಪಾತ್ರದಲ್ಲಿ ಮಲೈಕಾ ನಟಿಸಿದ್ದಾರೆ. ಕಲ್ಟ್‌ ಸಿನಿಮಾದ ನಾಯಕಿಯಾಗಿ ರಚಿತಾ ರಾಮ್‌ ಹೆಸರು ಈಗಾಗಲೇ ಘೋಷಣೆಯಾಗಿದ್ದು, ಮತ್ತೊಬ್ಬ ನಾಯಕಿಯಾಗಿ ಮಲೈಕಾ ವಸುಪಾಲ್‌ ಅಭಿನಯಿಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮಲೈಕಾ, ಈ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್‌ ಇದೆ. ಅದರಲ್ಲಿ ಒಂದು ಸಾಂಪ್ರದಾಯಿಕ ಲುಕ್‌. ಅದಕ್ಕಾಗಿ ಭರತನಾಟ್ಯ, ಕಥಕ್‌ ನೃತ್ಯಗಳ ಎಕ್ಸ್‌ಪ್ರೆಶನ್‌ಗಳನ್ನು ಪ್ರಾಕ್ಟೀಸ್‌ ಮಾಡುತ್ತಿದ್ದೇನೆ. ಉಳಿದಂತೆ ನನ್ನ ಫಿಟ್‌ನೆಸ್‌ ಚೆನ್ನಾಗಿಯೇ ಇರುವ ಕಾರಣ ತೂಕ ಕಡಿಮೆ ಅಥವಾ ಹೆಚ್ಚು ಮಾಡುವ ಅವಶ್ಯಕತೆ ಇಲ್ಲ ಎಂದು ನಿರ್ದೇಶಕರೇ ಹೇಳಿದ್ದಾರೆ.

ಅನಿಲ್‌ ಸರ್‌ ನಿರ್ದೇಶನದ ಉಪಾಧ್ಯಕ್ಷ ಸಿನಿಮಾದಲ್ಲಿ ನಾನು ನಟಿಸಿರುವ ಕಾರಣ ಅವರಿಗೆ ನನ್ನ ನಟನೆಯ ಶಕ್ತಿಯ ಬಗ್ಗೆ ಗೊತ್ತಿತ್ತು. ನನ್ನ ಸ್ಕಿಲ್‌ ಗುರುತಿಸುವ ಜೊತೆಗೆ ನಟನೆಯಲ್ಲಿ ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು. ಅವರ ಜೊತೆಗೆ ಮತ್ತೆ ಕೆಲಸ ಮಾಡಲು ಖುಷಿ ಇದೆ. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ನನ್ನ ಭಾಗದ ಶೂಟಿಂಗ್‌ ನಡೆಯಲಿದೆ ಎಂದಿದ್ದಾರೆ. ರಚಿತಾ ರಾಮ್‌ ಅವರಂಥಾ ಕಲಾವಿದೆಯ ಜೊತೆಗೆ ತೆರೆ ಹಂಚಿಕೊಳ್ಳಲು ಖುಷಿ ಇದೆ. ಅವರು ಇಂಡಸ್ಟ್ರಿಯಲ್ಲಿ ಸಾಕಷ್ಟು ಜನಪ್ರಿಯರಾಗಿರುವ ನಟಿ ಎಂದಿದ್ದಾರೆ.

ಇನ್ನು ಈಗಷ್ಟೇ ಅಂಬೆಗಾಲಿಡುತ್ತಿರುವ ನನ್ನಂಥವರಿಗೆ ಅವರ ಜೊತೆ ನಟಿಸಲು ಅವಕಾಶ ಸಿಕ್ಕರೆ ಅದಕ್ಕಿಂತ ಖುಷಿ ಸಂಗತಿ ಇಲ್ಲ. ನಾನು ಕೇಳಿರುವ ಕಥೆಗಳಲ್ಲೇ ಈ ಸಿನಿಮಾ ಕಥೆ ವಿಭಿನ್ನ, ಇಂಟರೆಸ್ಟಿಂಗ್‌ ಆಗಿದೆ’ ಎಂದೂ ಮಲೈಕಾ ತಿಳಿಸಿದ್ದಾರೆ.

ಇದನ್ನೂ ಓದಿ : ‘ಡಿ’ ಬಾಸ್​​ ರಿಲೀಸ್​​ ಆಗೋವರೆಗೂ ನಟ ಧನ್ವೀರ್ ಬರ್ತ್​ಡೇಗೆ ಬ್ರೇಕ್​ – ಅಭಿಮಾನಿಗಳಿಗೆ ವಿನಂತಿ ಪತ್ರ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here