ಬೆಂಗಳೂರು : ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ಗಿಫ್ಟ್ ಸಿಕ್ಕಿದ್ದು, ಇಂದು ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮಧುರೈ-ಬೆಂಗಳೂರು, ಚೆನ್ನೈ-ನಾಗರಕೋಯಿಲ್ ಮತ್ತು ಮೀರತ್-ಲಖನೌ ನೂತನ ರೈಲುಗಳು ಇಂದಿನಿಂದ ಸೇವೆ ಆರಂಭಿಸಲಿವೆ.
ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗ್ತಿದೆ. ರೈಲು ಮಧುರೈನಿಂದ ಬೆಳಗ್ಗೆ 5.15ಕ್ಕೆ ಹೊರಟು ಬೆಂಗಳೂರು ದಂಡು ಸ್ಟೇಷನ್ಗೆ 1ಕ್ಕೆ ತಲುಪಲಿದೆ. ಪ್ರಧಾನ ಮಂತ್ರಿಗಳ ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ್ ಭಾರತದ ದೂರದೃಷ್ಟಿಯನ್ನು ಸಾಕಾರಾಗೊಳಿಸುವ ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿವಿಧ ನಗರಗಳಿಗೆ ಅತಿ ವೇಗವಾಗಿ ಸಂಪರ್ಕ ಕಲ್ಪಿಸುತ್ತದೆ.
ಇಂದು ಮೀರತ್-ಲಕ್ನೋ, ಮಧುರೈ-ಬೆಂಗಳೂರು ಮತ್ತು ಚೆನ್ನೈ -ನಾಗರಕೋಯಿಲ್ ನಡುವಿನ ಮೂರು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಮೀರತ್-ಲಕ್ನೋ ರೈಲಿನಿಂದ ಎರಡು ನಗರಗಳ ನಡುವಿನ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ಪ್ರಯಾಣಿಕರಿಗೆ ಸುಮಾರು 1 ಗಂಟೆಯ ಸಮಯ ಉಳಿತಾಯವಾಗಲಿದೆ. ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ವಂದೇ ಭಾರತ್ ರೈಲಿನಿಂದ ಸುಮಾರು 2 ಗಂಟೆ ಸಮಯ ಉಳಿತಾಯವಾಗಲಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡಗೆ ಜೈಲಾ-ಬೇಲಾ? ಇಂದು ಭವಿಷ್ಯ ನಿರ್ಧಾರ..!