ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸೂಪರ್ ಹಿಟ್ ಪಟ್ಟ ಪಡೆದುಕೊಂಡಿದೆ. ಇತ್ತೀಚಿನ ಕೆಲ ದಿನಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ, ಕೃಷ್ಣ ಪ್ರಣಯ ಸಖಿ ಸಿನಿಮಾ ಒಳ್ಳೆಯ ಕಲೆಕ್ಷನ್ ಜತೆಗೆ ಜನಮೆಚ್ಚುಗೆಯನ್ನೂ ಪಡೆದಿತ್ತು. ಇದೀಗ ಈ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ನಟ ಗಣೇಶ್ ಅವರು ಲಕ್ಷುರಿ ಕಾರನ್ನು ಖರೀದಿಸಿದ್ದಾರೆ.
ಹೌದು, ನಟ ಗೋಲ್ಡನ್ ಸ್ಟಾರ್ ಮನೆಗೆ ಅದ್ಧೂರಿಯಾದ ಬ್ಲ್ಯಾಕ್ ರೇಂಜ್ ರೋವರ್ ಕಾರು ಬಂದಿದೆ. ಶೋ ರೂಂ ಸಿಬ್ಬಂದಿ ಗೋಲ್ಡನ್ ಸ್ಟಾರ್ ಮನೆಗೆ ಕಾರ್ ಡೆಲಿವರಿ ಕೊಟ್ಟಿದ್ದಾರೆ. ಮಗ ವಿಹಾನ್‌ಗೆ ಪೇಟಾ ತೊಡಿಸಿ ಸತ್ಕರಿಸಿದ್ದು ಫ್ಯಾಮಿಲಿ ಸಮೇತ ಗಣೇಶ್ ಕಾರ್ ಬರಮಾಡಿಕೊಂಡಿದ್ದಾರೆ. ಇದೀಗ ಈ ಫೋಟೊ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮನೆಗೆ ಬಂದ ಐಷಾರಾಮಿ ಕಾರ್ನಲ್ಲಿ ಮಡದಿ ಮಕ್ಕಳ ಜೊತೆ ಗಣಿ ಒಂದು ರೌಂಡ್ ಹಾಕಿದ್ದಾರೆ. ಆಪ್ತರ ಜೊತೆ ಕೇಕ್ ಕತ್ತರಿಸಿ ಗೋಲ್ಡನ್ ಸ್ಟಾರ್ ಸಿಹಿ ಹಂಚಿದ್ದಾರೆ. ನೆಚ್ಚಿನ ನಟನ ಮನೆಯಲ್ಲಿ ದುಬಾರಿ ಬೆಲೆಯ ಕಾರ್ ಫ್ಯಾನ್ಸ್ ಖುಷಿಯಾಗಿ ಶುಭ ಹಾರೈಸುತ್ತಿದ್ದಾರೆ.
ಶ್ರೀನಿವಾಸ್ ರಾಜು ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಮೊದಲ ದಿನದಿಂದಲೂ ಪ್ರೇಕ್ಷಕರ ಮೆಚ್ಚುಗೆ ಪಡೆದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಹಿಂದೆ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿದ್ದ ನಿರ್ದೇಶಕರು ಈ ಬಾರಿ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಕೊಟ್ಟಿದ್ದಾರೆ.
ಇದನ್ನೂ ಓದಿ : ಡೆಲಿವರಿ ವೇಳೆ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ – ಬಿಗ್ ಬಾಸ್ಕೆಟ್ ಡೆಲಿವರಿ ಬಾಯ್ ಅರೆಸ್ಟ್..!