ಬೆಂಗಳೂರು : ವ್ಯವಹಾರದಲ್ಲಿ ನಷ್ಟ ಉಂಟಾದ್ದರಿಂದ ಮನನೊಂದು, ನೆಲಮಂಗಲದ ಶ್ರೀನಂದಿ ವೈಭವ್ ಹೋಟೆಲ್ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 24 ವರ್ಷದ ಸನ್ನಿಧಿ ಸೂಸೈಡ್ ಮಾಡಿಕೊಂಡ ವ್ಯಕ್ತಿ.
ಹೋಟೆಲ್ ಪಕ್ಕದ ಜಾಗದಲ್ಲಿ ಕಬ್ಬಿಣದ ಆ್ಯಂಗಲ್ಗೆ ಸ್ಕ್ರೀನ್ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ವ್ಯವಹಾರದಲ್ಲಿ ನಷ್ಟ ಉಂಟಾದ್ದರಿಂದ ಮನನೊಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮೃತನ ಅಕ್ಕ ಶ್ರೀನಿಧಿಶೆಟ್ಟಿ ಎಂಬುವವರು ನೆಲಮಂಗಲ ಟೌನ್ ಠಾಣೆಗೆ ದೂರು ನೀಡಿದ್ದು, ಆತ್ಮಹತ್ಯೆ ಬಗ್ಗೆ ಯಾವುದೇ ಅನುಮಾನ ಇಲ್ಲವೆಂದು ಹೇಳಿಕೆ ಕೊಟ್ಟಿದ್ದಾರೆ. ಇನ್ನು ಹೋಟೆಲ್ನಲ್ಲಿ ಕೆಲಸ ಮಾಡುವ ಸಮಂತ್ ಅವರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ನನ್ನ ಗಂಡನ ಪ್ರಾಣ ತೆಗೆದು ಬಿಟ್ರು ಶಾಸಕ ಚನ್ನಾರೆಡ್ಡಿ – PSI ಪರಶುರಾಮ್ ಪತ್ನಿ ಗಂಭೀರ ಆರೋಪ..!
Post Views: 540