ಉಡುಪಿ : ಜಿಲ್ಲೆಯ ಕುಂದಾಪುರದಲ್ಲಿ ಬಸ್ಗೆ ಲಾರಿ ಡಿಕ್ಕಿ ಹೊಡೆದು ಪರಿಣಾಮ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ತಲ್ಲೂರು ಪ್ರವಾಸಿ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ಯಲ್ಲಿ ಖಾಸಗಿ ಬಸ್ಗೆ ಲಾರಿ ಹಿಂದಿನಿಂದ ಅಪ್ಪಳಿಸಿದೆ.
ಬೈಂದೂರು ಕಡೆಯಿಂದ ಕುಂದಾಪುರಕ್ಕೆ ಬಸ್ ಹೊಗುತ್ತಿತ್ತು. ಈ ವೇಳೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ ನಿಲ್ಲಿಸಿದ ಕೂಡ್ಲೇ ಹಿಂದಿನಿಂದ ಬರ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕುಂದಾಪುರ ವೆಂಕಟರಮಣ ಸ್ಕೂಲ್ ವಿದ್ಯಾರ್ಥಿ ಪ್ರಸಾದ್ ಗಂಭೀರ ಗಾಯಗೊಂಡಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲೊಂದು ಲವ್, ಸೆಕ್ಸ್, ದೋಖಾ ಕಹಾನಿ – ಪತಿ ಬಿಟ್ಟು ಬಂದವಳಿಗೆ ನಂಬಿಸಿ ಮೋಸ ಮಾಡಿದ ಆಸಾಮಿ..!
Post Views: 226