ಚಿತ್ರದುರ್ಗ : ಲಂಚ ಸ್ವೀಕರಿಸುತ್ತಿದ್ದ ಖಜಾನೆ ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೊಸದುರ್ಗ ತಾಲ್ಲೂಕು ಖಜಾನೆ FDA ವರಲಕ್ಷ್ಮಿ, ಖಜಾನೆ ಮುಖ್ಯ ಲೆಕ್ಕಿಗ ಗೋವಿಂದರಾಜ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.
FDA ವರಲಕ್ಷ್ಮಿ, ಖಜಾನೆ ಮುಖ್ಯ ಲೆಕ್ಕಿಗ ಗೋವಿಂದರಾಜ್ ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಲೋಕಾ ಟೀಂ ದಾಳಿ ನಡೆಸಿದೆ. ನಿವೃತ್ತ ಶಿಕ್ಷಕಿ ಶಾರದಮ್ಮ ಎಂಬುವರ ಪೆನ್ಷನ್ ವಿಚಾರಕ್ಕೆ 2000 ಲಂಚಕ್ಕೆ ಡಿಮ್ಯಾಂಡ್ ಮಾಡದ್ದರು.
ಈ ಸಂಬಂಧ ಹೊಸದುರ್ಗ ನಗರದ ನಿವೃತ್ತ ಶಿಕ್ಷಕಿ ಶಾರದಮ್ಮ ದೂರು ನೀಡಿದ್ದರು. ಹಾಗಾಗಿ ಇನ್ಸ್ಪೆಕ್ಟರ್ ಗುರುಬಸವರಾಜ್, ಮಂಜುನಾಥ್ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. 2000 ರೂ. ಹಣ ಕೊಡುವಾಗ ಸಿಬ್ಬಂದಿಗಳನನ್ನು ಲೋಕಾ ಟೀಂ ರೆಡ್ ಹ್ಯಾಂಡ್ ಆಗಿ ಹಿಡಿದಿದೆ.
ಇದನ್ನೂ ಓದಿ : ಕಾನ್ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ ಕೇಸ್ – ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರಿಂದ ಮುಂದುವರಿದ ತನಿಖೆ..!
Post Views: 429