ಬೆಂಗಳೂರು : ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ 200 ಕೋಟಿ ಮೆಗಾ ಹಗರಣ ನಡೆದಿರೋ ಆರೋಪ ಕೇಳಿ ಬಂದಿದೆ. ಸಾರ್ವಜನಿಕರ ದೂರಿನ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಲೋಕಾಯುಕ್ತ ರೇಡ್ಗೆ ಕೆ.ಸಿ ಜನರಲ್ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದಾರೆ.
200 ಕೋಟಿ ಆಸ್ಪತ್ರೆ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದ ಶಂಕೆ ವ್ಯಕ್ತವಾಗಿತ್ತು. ದೂರಿನ ಹಿನ್ನಲೆಯಲ್ಲಿ ದಿಢೀರ್ ಲೋಕಾಯುಕ್ತ ದಾಳಿ ಮಾಡಿ, ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನ ಪರಿಶೀಲನೆ ಮಾಡಿದ್ದಾರೆ.
SP ಶ್ರೀನಾಥ್ ಜೋಷಿ ಮಾರ್ಗದರ್ಶನದಲ್ಲಿ ಆಸ್ಪತ್ರೆ ಭೇಟಿ ನೀಡಿದ ಮುಖ್ಯ ಲೋಕಾಯುಕ್ತ B.S ಪಾಟೀಲ್, ನ್ಯಾ.ಪಣೀಂದ್ರ, ನ್ಯಾ.ಬಿ.ವೀರಪ್ಪ ಆಸ್ಪತ್ರೆ ಸ್ವಚ್ಛತೆ , ರೋಗಿಗಳಿಗೆ ಸಿಗೋ ಸೌಲಭ್ಯ, ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿಗಳು ರೋಗಿಗಳ ಬಳಿಯೇ ಸಮಸ್ಯೆ ಕೇಳಿದ್ದಾರೆ. ಮೂರು ತಂಡಗಳಾಗಿ ಆಸ್ಪತ್ರೆಯ ಪ್ರತಿಯೊಂದು ವಾರ್ಡ್ಗೆ ಭೇಟಿ ನೀಡುತ್ತಿರುವ ಅಧಿಕಾರಿಗಳು, ಮೆಡಿಕಲ್ ಸೂಪರಿಟೆಂಡೆಂಟ್ ಸೇರಿದಂತೆ ಸಿಬ್ಬಂದಿಯ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ವಕೀಲೆ ಜೀವ ಆತ್ಮಹತ್ಯೆ ಕೇಸ್ – ತನಿಖೆ ಚುರುಕುಗೊಳಿಸಿದ ಸಿಸಿಬಿ ಅಧಿಕಾರಿಗಳು..!