Download Our App

Follow us

Home » ಅಪರಾಧ » ನೋಡ​ ನೋಡುತ್ತಲೇ ಚೂರಿ ಇರಿದೇ ಬಿಟ್ಟ.. ಬೆಚ್ಚಿ ಬೀಳಿಸುತ್ತೆ ಉಡುಪಿ ಶೋ ರೂಂ ಲೈವ್​ ಅಟ್ಯಾಕ್​​​..!

ನೋಡ​ ನೋಡುತ್ತಲೇ ಚೂರಿ ಇರಿದೇ ಬಿಟ್ಟ.. ಬೆಚ್ಚಿ ಬೀಳಿಸುತ್ತೆ ಉಡುಪಿ ಶೋ ರೂಂ ಲೈವ್​ ಅಟ್ಯಾಕ್​​​..!

ಉಡುಪಿ : ನಗರದ ಪ್ರಸಿದ್ಧ ಹರ್ಷ ಶೋ ರೂಂನ ಕ್ಲಸ್ಟರ್ ಮ್ಯಾನೇಜರ್‌ಗೆ ಸೆಕ್ಯುರಿಟಿ ಗಾರ್ಡ್ ಚೂರಿಯಿಂದ ಇರಿದು ಕೊಲೆಗೆ ಯತ್ನಸಿರುವ ಘಟನೆ ಆಗಸ್ಟ್ 10ರಂದು ಸಂಜೆ 7:30 ವೇಳೆಗೆ ನಡೆದಿದೆ. ಈ ಬಗ್ಗೆ ಹಲ್ಲೆಗೆ ಒಳಗಾದ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್‌ ಎವರೆಸ್ಟ್(36) ಸಂತೆಕಟ್ಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಹರ್ಷ ಶೋರೂಂನಲ್ಲಿ ಪ್ರಸಾದ್​ ಎಂಬಾತ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ. ಕೆಲಸದಲ್ಲಿ ಅಶಿಸ್ತು ತೋರಿದ್ದಕ್ಕಾಗಿ ಪ್ರಸಾದ್​ಗೆ ವಾರ್ನಿಂಗ್ ನೀಡಲಾಗಿತ್ತು. ಇನ್ನು ಕೆಲಸದಿಂದ ತೆಗೆಯದಂತೆ ರೋನ್ಸನ್ ಬಳಿ ಪ್ರಸಾದ್ ಕೇಳಿಕೊಂಡಿದ್ದ ಎನ್ನಲಾಗಿದೆ.

ಮರುದಿನ ಮೀಟಿಂಗ್​ನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ತಿಳಿಸುತ್ತೇನೆ ಎಂದು ರೋನ್ಸನ್ ಪ್ರಸಾದ್​ಗೆ ಹೇಳಿದ್ದರು. ಈ ವೇಳೆ ರೋನ್ಸನ್ ಮಾತಿಗೆ ಪ್ರಸಾದ ಸಿಟ್ಟುಗೊಂಡು ಅವಾಚ್ಯ ಶಬ್ದಗಳಿಂದ ಬೈದಿದ್ದ.

ಅಲ್ಲದೆ ಆ ಬಳಿಕ ರೋನ್ಸನ್ ರವರು ಸಂಜೆ ವೇಳೆ ಹೋಗುತ್ತಿದ್ದಾಗ ಕಟ್ಟಡದ ಗೌಂಡ್ ಫ್ಲೋರ್‌ನಲ್ಲಿ ಪ್ರಸಾದ್ ಕಾದು ಕುಳಿತಿದ್ದ. ರೋನ್ಸನ್ ತೆರಳುತ್ತಿದ್ದಂತೆ ಹಿಂಬದಿಯಿಂದ ಚೂರಿಯಲ್ಲಿ ಇರಿಯಲು ಮುಂದಾಗಿದ್ದಾನೆ. ಪ್ರಾಣಾಪಯ ಅರಿತು ರೋನ್ಸನ್ ಸ್ಥಳದಿಂದ ಓಡಿದ್ದಾರೆ. ಈ ವೇಳೆ ಪ್ರಸಾದ್, ರೋನ್ಸನ್​ನ್ನು ಬೆನ್ನಟ್ಟಿ ಹೋಗಿ ಕೊಲೆಗೆ ಯತ್ನಿಸಿದ್ದಾನೆ. ರೋನ್ಸನ್ ಕೊಲೆಗೆ ಸೆಕ್ಯುರಿಟಿ  ಪ್ರಸಾದ್ ಯತ್ನಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್​ ಆಗಿದೆ. ಘಟನೆ ಸಂಬಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹೇಮಾವತಿ ನಾಲೆ ಕಳಪೆ ಕಾಮಗಾರಿ ವಿರುದ್ಧ ರೊಚ್ಚಿಗೆದ್ದ ರೈತರು – AE ಕಚೇರಿ ಮುಂದೆ ಧರಣಿ‌..!

Leave a Comment

DG Ad

RELATED LATEST NEWS

Top Headlines

ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲಿಗೆ ಇಂದು ಪ್ರಧಾನಿ ಮೋದಿ ಚಾಲನೆ..!

ದೇಶದ ಮೊದಲ ವಂದೇ ಭಾರತ್​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ಗುಜರಾತ್​ನ ಭುಜ್​-ಅಹ್ಮದಾಬಾದ್​ ನಡುವೆ ವಂದೇ ಭಾರತ್​ ಮೆಟ್ರೋ ಸಂಚಾರ ಮಾಡಲಿದೆ. 100-250

Live Cricket

Add Your Heading Text Here