ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಿನ್ನೆಯಷ್ಟೇ ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ 3991 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ರೇಣುಕಾಸ್ವಾಮಿಗೆ ಹಿಂಸೆ ನೀಡಿರುವ ಕೆಲವು ವೈರಲ್ ಆಗುತ್ತಿವೆ. ಇದೀಗ ರೇಣುಕಾಸ್ವಾಮಿ ಕೊನೆ ಕ್ಷಣದ ಮತ್ತೊಂದು ಪೋಟೋ ರಿವೀಲ್ ಆಗಿದೆ.
ರೇಣುಕಾಸ್ವಾಮಿಯ ಶವ ಎಸೆದು ಹೋಗೋ ಕಾರಿನ ಫೋಟೋ ಇದೀಗ ಬಿಟಿವಿಗೆ ಲಭ್ಯವಾಗಿದೆ. ಡಿ-ಗ್ಯಾಂಗ್ ಜೂನ್ 8ರ ಮಧ್ಯರಾತ್ರಿ ಹಂತಕರು ಸ್ಕಾರ್ಪಿಯೋದಲ್ಲಿ ಸುಮನಹಳ್ಳಿ ಬಳಿಗೆ ಶವ ತಂದಿದ್ದರು. ಬಳಿಕ ಡಿಕ್ಕಿಯಿಂದ ಶವ ತಂದು ಬಿಸಾಡಿದ್ದರು.
ಶವ ತಂದು ಬಿಸಾಡಿದ ಹಂತಕರು ಭಯ, ಅವಸರದಲ್ಲಿ ಸ್ಕಾರ್ಪಿಯೋದ ಡೋರ್ ಹಾಕದೆ ಎಸ್ಕೇಪ್ ಆಗಿದ್ದರು. ಇದೀಗ ಅಪಾರ್ಟ್ಮೆಂಟ್ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರ್ನ ದೃಶ್ಯ ಪತ್ತೆಯಾಗಿದೆ.
ಇನ್ನು ರೇಣುಕಾಸ್ವಾಮಿಗೆ ಹಲ್ಲೆ ಮಾಡಿ ಲಾರಿಗೆ ಗುದ್ದಿಸಿ ಆರೋಪಿಗಳು ಚಿತ್ರಹಿಂಸೆ ಕೊಟ್ಟಿರುವ ಫೋಟೊಗಳು ಲಭ್ಯವಾಗಿದೆ. ತಲೆ ಮೂರ್ನಾಲ್ಕು ಇಂಚು ಓಪನ್ ಆಗಿರುವ ಫೋಟೋ ಮೂಲಕ ದರ್ಶನ್ ಗ್ಯಾಂಗ್‌ನ ಕ್ರೌರ್ಯ ಹೇಗಿತ್ತು ಎಂಬುದಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ. ಮೊದಲಿಗೆ ಲಾಠಿ, ಮರದ ಪೀಸ್‌ನಿಂದ ಹಲ್ಲೆ ಮಾಡಿದ್ದಾರೆ. ಆಮೇಲೆ ನಿಂತಿದ್ದ ಲಾರಿಗೆ ಪದೇ ಪದೇ ತಲೆ ಗುದ್ದಿಸಿದ್ದಾರೆ. ತಲೆ ಗುದ್ದಿಸಿದ ಪರಿಣಾಮ, ತೀವ್ರ ರಕ್ತಸ್ರಾವವಾಗಿ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಹೊಟೇಲ್ಗೆ ನುಗ್ಗಿದ ಟಿಪ್ಪರ್ – ಇಬ್ಬರು ಸಾವು, ಹಲವರಿಗೆ ಗಾಯ..!