ಬೆಂಗಳೂರು : ರೈತರಿಗೆ ಸುಳ್ಳು ಭರವಸೆ ನೀಡಿ ಸರ್ಕಾರದಿಂದ ಜಮೀನು ಪಡೆದಿದ್ದ ಮಾತ ಅಮೃತಾನಂದಮಯಿ ಮಠದ ತನಿಖೆಗೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಸುಮಾರು 25 ಬಡ ರೈತ ಕುಟುಂಬಗಳು ಇದರಿಂದ ಬೀದಿಗೆ ಬಂದಿದ್ದವು. ಈ ಹಿನ್ನಲೆಯಲ್ಲಿ ಮಾಹದೇವಪುರದ ಕಸವನಹಳ್ಳಿಯಲ್ಲಿರೊ ಅಮೃತಾನಂದಮಯಿ ಮಠದ ತನಿಖೆ ಆದೇಶ ನೀಡಿದ್ದಾರೆ.
ಮಾಹದೇವಪುರದ ಕಸವನಹಳ್ಳಿಯಲ್ಲಿರೊ ಅಮೃತಾನಂದಮಯಿ ಮಠ, ಸುಳ್ಳು ಆಶ್ವಾಸನೆ ನೀಡಿ ಸರ್ಕಾರಿ ಜಾಗ ಪಡೆದಿತ್ತು. 2000 ನೇ ಇಸವಿಯಲ್ಲಿ 22 ಎಕರೆ ಜಮೀನು ಪಡೆದಿದ್ದ ಮಠ, 2000 ವಿದವೆಯರಿಗೆ ಮನೆ, ಸೂಪರ್ ಸ್ಪೇಷಲಿಟಿ ಆಸ್ಪತ್ರೆ, ಅನಾಥಾಶ್ರಮ, ಭ್ರಮ್ಹಾಸ್ತ್ರ ದೇವಸ್ತಾನ,ಉಚಿತ ಶಿಕ್ಷಣ ಮತ್ತು ವೈಧ್ಯಕೀಯ ಸೌಲಭ್ಯ ನೀಡೊದಾಗಿ ಹೇಳಿತ್ತು.
ಆದರೆ ಊರಿನ ಯಾರಿಗೂ ಮಠದೊಳಗೆ ಪ್ರವೇಶವನ್ನೂ ನೀಡದೆ, ಲಕ್ಷ-ಲಕ್ಷ ಫೀಸ್ ಪಡೆದು ಹೊರಗಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡ್ತಿದ್ದಾರೆ. ಅಷ್ಟೇ ಅಲ್ಲದೇ ಭೂಮಿ ಕೊಟ್ಟ ಸ್ಥಳೀಯರಿಗೆ ಅವಕಾಶ ನೀಡದೆ, ಸ್ವಂತಕ್ಕೆ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರಕ್ಕೆ ಸಲ್ಲಿಸಿದ್ದ ಯಾವ ಭರವಸೆ ಈಡೆರಿಸದ ಅಮೃತಾನಂದಮಯಿ ಮಠದ ವಿರುದ್ದ ಕೂಡಲೇ ಕ್ರಮ ಜರುಗಿಸಿ ಎಂದು ಗ್ರಾಮಸ್ಥರ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ರಾಜ್ಯಪಾಲರು ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೂ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.
ಇದನ್ನೂ ಓದಿ : ಕೇರಳ ದುರಂತಕ್ಕೆ ಮಿಡಿದ ಡಿಸಿಎಂ ಡಿಕೆಶಿ, ಸಚಿವ ರಾಮಲಿಂಗಾರೆಡ್ಡಿ- 1.35 ಕೋಟಿ ರೂ. ಪರಿಹಾರ ಸಾಮಗ್ರಿ ರವಾನೆ..!