ಕಳ್ಳರು ಚಿನ್ನಾಭರಣ, ಹಣ ಕದ್ದು ಪರಾರಿಯಾಗುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಅಷ್ಟೇ ಅಲ್ಲದೆ ಖತರ್ನಾಕ್ ಕಳ್ಳರು ಮನೆಯ ಹೊರಗೆ ನಿಲ್ಲಿಸಿದ ವಾಹನಗಳನ್ನೇ ಕದ್ದು ಎಸ್ಕೇಪ್ ಆಗುತ್ತಾರೆ. ಆದರೆ ಇಲ್ಲೊಂದು ಕಡೆ ಯುವತಿಯರಿಬ್ಬರು ಅಂಗಡಿಯ ಹೊರಗಿಟ್ಟಿದ್ದ ಹೂವಿನ ಗಿಡವನ್ನು ಕದ್ದೊಯ್ದಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಹೌದು.. ಖತರ್ನಾಕ್ ಪ್ಲಾನ್ ಮಾಡಿ ರಾತ್ರಿ ಯಾರು ಇಲ್ಲದ ವೇಳೆ ಸ್ಕೂಟಿಯಲ್ಲಿ ಬಂದಂತಹ ಇಬ್ಬರು ಮಹಿಳೆಯರು ಅಂಗಡಿಯ ಹೊರಗೆ ಪಾಟ್‌ನಲ್ಲಿ ಇಟ್ಟಿದ್ದಂತಹ ದೊಡ್ಡ ಗಿಡವನ್ನೇ ಕದ್ದೊಯ್ದಿರುವ ಘಟನೆ ಛತ್ತೀಸ್ಗಢದ ರಾಯಪುರದಲ್ಲಿ ನಡೆದಿದೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಚಿತ್ರ ಕಳ್ಳತನದ ದೃಶ್ಯವನ್ನು ಕಂಡು ಗಿಡವನ್ನೂ ಕದಿಯುವವರಿದ್ದಾರಾ ಎಂದು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಅಕ್ಟೋಬರ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.8 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಗೂಡ್ಸ್ ವಾಹನ ಪಲ್ಟಿ – ಚಾಲಕ ಪ್ರಾಣಾಪಾಯದಿಂದ ಪಾರು..!