ಬೆಂಗಳೂರು : ರಾಜ್ಯದಲ್ಲಿ ಮತ್ತೆ ಬಿಜೆಪಿ-ಕಾಂಗ್ರೆಸ್ ನಾಯಕರ ಜಟಾಪಟಿ ಶುರುವಾಗಿದೆ. ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಹೈಡ್ರಾಮಾಕ್ಕೆ ವೇದಿಕೆ ಆಗಿದೆ.
ಬೆಂಗಳೂರಿನ ಲಗ್ಗೆರೆ ಸಮೀಪದ ಲಕ್ಷ್ಮಿದೇವಿನಗರಕ್ಕೆ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಜನ್ಮದಿನದ ದಿನಾಚರಣೆಗೆಂದು ಶಾಸಕ ಮುನಿರತ್ನ ಆಗಮಿಸಿದ್ರು. ಇದೇ ವೇಳೆ ಶಾಸಕ ಮುನಿರತ್ನ ತಲೆಗೆ ಗುರಿಯಿಟ್ಟು ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೊಟ್ಟೆ ಹೊಡೆದಿದ್ದಾನೆ. ಇದರಿಂದ ಮುನಿರತ್ನ ತಲೆಗೆ ಗಾಯವಾಗಿದ್ದು, ನನ್ನ ಮೇಲೆ ಆ್ಯಸಿಡ್ ಅಟ್ಯಾಕ್ ನಡೆದಿದೆ ಎಂದು ಆರೋಪಿಸಿದ್ದರು.
ಇದೀಗ ಘಟನಾ ಸಂಬಂಧ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದು, ನನ್ನ ಹತ್ಯೆಯಾದರೆ ಅದಕ್ಕೆ ಕುಸುಮಾ ಹನುಮಂತರಾಯಪ್ಪ ಕಾರಣ. ನನ್ನ ಮೇಲೆ ಹಲ್ಲೆಗೆ ಸುಪಾರಿ ಕೊಟ್ಟಿದ್ದೂ ಅವರೇ. MLA ಆಗೋಕ್ಕೋಸ್ಕರ ನನ್ನ ಕೊಲೆಗೆ ಕುಸುಮಾ ಸಂಚು ರೂಪಿಸಿದ್ದಾರೆ. 100ಕ್ಕೂ ಹೆಚ್ಚು ಜನರನ್ನು ಸೇರಿಸಿ ಗುಂಪಿನಲ್ಲಿ ಕೊಲ್ಲಲು ಸಂಚು ಮಾಡಿದ್ದರು. ಹೊಡೆಯಲು, ಬಡಿಯಲು, ಮಸಿ ಬಳಿಯಲು ರೇಟ್ ಫಿಕ್ಸ್ ಮಾಡಿದ್ದಾರೆ. ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿ ಹನುಮಂತರಾಯಪ್ಪ ಕಳ್ಸಿದ್ದಾರೆ.
ಜಾಲಹಳ್ಳಿ ಕಾರ್ಯಕ್ರಮದಲ್ಲಿ ಆ್ಯಸಿಡ್ ಅಟ್ಯಾಕ್ ನಡಿದಿತ್ತು. ಈಗ್ಲೂ ಮೊಟ್ಟೆಯಲ್ಲಿ ಆ್ಯಸಿಡ್ ಹಾಕಿ ಸಾಯ್ಸೋಕ್ಕೆ ನೋಡಿದ್ದಾರೆ. ಹಿಂದೆ ಕೆಲವರು ಬೆದರಿಕೆ ಹಾಕಿದಂತೆಯೇ ಘಟನೆಗಳು ನಡೀತಿವೆ. ಕೆಲವರಿಗೆ ಕುಸುಮಾರನ್ನು MLA ಮಾಡ್ಲೇಬೇಕು ಅನ್ನೋ ಹಠ ಇದೆ. ಆ ನಾಯಕರೇ ಈ ಘಟನೆಗಳ ಹಿಂದೆ ಷಡ್ಯಂತ್ರ ಮಾಡಿದ್ದಾರೆ. 100ಕ್ಕೂ ಹೆಚ್ಚು ಪೊಲೀಸ್ ಭದ್ರತೆಯ ಮಧ್ಯೆಯೇ ದಾಳಿ ಮಾಡಿದ್ದಾರೆ. ಕೊಲೆ ಮಾಡಿ ಚುನಾವಣೆ ನಡೆಸೋ ಹುನ್ನಾರ ಮಾಡಲಾಗಿದೆ ಎಂದು ಹತ್ಯೆ ಸಂಚಿನ ಬಗ್ಗೆ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಕುಂದಾನಗರಿ ಸಜ್ಜು – ಹೇಗಿರಲಿದೆ ‘ಕೈ’ ಪಾಳಯದ ಸಮಾವೇಶ?