ಮಂಡ್ಯ : ಮಂಡ್ಯದಲ್ಲಿ ಭಯಾನಕ ಆ್ಯಕ್ಸಿಡೆಂಟ್ವೊಂದ ನಡೆದಿದೆ. ಕ್ಯಾಂಟರ್ಗೆ ಡಿಕ್ಕಿ ಹೊಡೆದು KSRTC ಬಸ್ ಪಲ್ಟಿಯಾದ ಘಟನೆ ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ನಡೆದಿದೆ. ಘಟನೆಯ ಪರಿಣಾಮ ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿದೆ.
ಓವರ್ ಸ್ಪೀಡಾಗಿ ಹೋಗಿ ಕ್ಯಾಂಟರ್ಗೆ KSRTC ಬಸ್ ಡಿಕ್ಕಿ ಹೊಡೆದು,ಇದ್ದಕ್ಕಿದ್ದಂತೆ ಸರ್ವಿಸ್ ರೋಡ್ಗೆ ಹೋಗುವಾಗ ಪಲ್ಟಿ ಹೊಡೆದಿದೆ. ಇನ್ನು ಬಸ್ನಲ್ಲಿದ್ದವರನ್ನ ರಕ್ಷಿಸಿ ಮಾನವೀಯತೆ ಮೆರೆದ ಸಾರ್ವಜನಿಕರು ಗಾಯಾಳುಗಳನ್ನು ಹತ್ತಿರವಿದ್ದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, SP ಮಲ್ಲಿಕಾರ್ಜುನ್ ಬಲಾದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಆ್ಯಕ್ಸಿಡೆಂಟ್ ಸ್ಥಳಕ್ಕೆ ಶಾಸಕ ರವಿಕುಮಾರ್ ಗೌಡ ಭೇಟಿ ನೀಡಿ, ಘಟನೆ ಹೇಗೆ ಸಂಭವಿಸಿದೆ ಎಂದು ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ : ಮೈಸೂರಲ್ಲಿ ಅನುಮಾನಾಸ್ಪದವಾಗಿ ವೈದ್ಯೆ ಸಾವು – ಪತಿ ವಿರುದ್ದ ಕೊಲೆ ಆರೋಪ..!
Post Views: 524