Download Our App

Follow us

Home » ರಾಜ್ಯ » ಗಣಿ ಅಧಿಕಾರಿ ಮನೆಯೇ ಸಂಪತ್ತಿನ ಗಣಿ – ಕೃಷ್ಣವೇಣಿ ಮನೆಯಲ್ಲಿ ರಾಶಿ-ರಾಶಿ ಬಂಗಾರ ನೋಡಿ ‘ಲೋಕಾ’ ಶಾಕ್​​..!

ಗಣಿ ಅಧಿಕಾರಿ ಮನೆಯೇ ಸಂಪತ್ತಿನ ಗಣಿ – ಕೃಷ್ಣವೇಣಿ ಮನೆಯಲ್ಲಿ ರಾಶಿ-ರಾಶಿ ಬಂಗಾರ ನೋಡಿ ‘ಲೋಕಾ’ ಶಾಕ್​​..!

ಮಂಗಳುರು : ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಲ್ಲಿ ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸುಮಾರು 25 ಕಡೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಮಂಡ್ಯ, ಮಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸುವ ಮೂಲಕ ಭ್ರಷ್ಟರ ವಿರುದ್ಡ ಲೋಕಾಯುಕ್ತ ಅಧಿಕಾರಿಗಳು ಸಮರ ಸಾರಿದ್ದಾರೆ.

ಇದೀಗ ಲೋಕಾಯುಕ್ತ ದಾಳಿ ವೇಳೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಕೃಷ್ಣವೇಣಿ ಮನೆಯಲ್ಲಿ ರಾಶಿ-ರಾಶಿ ಚಿನ್ನ ಪತ್ತೆಯಾಗಿದೆ. ಚಿನ್ನದ ನಕ್ಲೇಸ್​, ಚಿನ್ನದ ಸರ, ಉಂಗುರ, ಬೆಳ್ಳಿ ಆಭರಣ, ಚಿನ್ನದ ರಾಶಿ-ರಾಶಿ ಬಂಗಾರವನ್ನು ನೋಡಿ ಲೋಕಾ ಅಧಿಕಾರಿಗಳು ಶಾಕ್​​ ಆಗಿದ್ದಾರೆ.

ಲೋಕಾಯುಕ್ತ ಎಸ್ ಪಿ ನಟರಾಜ್ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಮನೆಗೆ ಹಾಗೂ ನಗರದ ಮಲ್ಲಿಕಟ್ಟೆಯಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಂಗಳೂರಿಗೆ ವರ್ಗಾವಣೆಯಾಗಿ ಬಂದಿದ್ದ ಕೃಷ್ಣವೇಣಿ ಅವರು ವೇಲೆನ್ಸಿಯಾದಲ್ಲಿರುವ ಫ್ರೆಡ್ ರೋಸ್ ಎನ್ನಲೇವ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ದಾಳಿ ನಡೆಸಿದ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ. ಇನ್ನು ಮೈಸೂರಿನಲ್ಲಿರುವ ಕೃಷ್ಣವೇಣಿ ಸೋದರನ ಮನೆ ಮೇಲೂ ದಾಳಿ ನಡೆಸಿದ ಅಧಿಕಾರಿಗಳು, ಮನೆ, ಜಮೀನು, ಹಣ, ಆಭರಣಕ್ಕೆ ಸಂಬಂಧಿಸಿ ದಾಖಲೆ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ವೀರಗಾಸೆ ಕಲಾವಿದನಾಗಿ ನಟ ವಿಜಯ ರಾಘವೇಂದ್ರ – ‘ರುದ್ರಾಭಿಷೇಕಂ’ ಚಿತ್ರಕ್ಕೆ ಚಾಲನೆ..!

Leave a Comment

DG Ad

RELATED LATEST NEWS

Top Headlines

ಕಟೀಲು ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದ ನಟ ಉಪೇಂದ್ರ..!

ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್, ನಟ ಉಪೇಂದ್ರ ಅಭಿನಯದ ‘ಯುಐ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ‘ಯುಐ’ ಟೀಮ್ ಜೊತೆ ನಟ ಉಪೇಂದ್ರ

Live Cricket

Add Your Heading Text Here