Download Our App

Follow us

Home » ಸಿನಿಮಾ » ಅ.25ಕ್ಕೆ ಕೋಮಲ್ ಅಭಿನಯದ ಬಹುನಿರೀಕ್ಷಿತ ‘ಯಲಾಕುನ್ನಿ’ ಚಿತ್ರ ತೆರೆಗೆ..!

ಅ.25ಕ್ಕೆ ಕೋಮಲ್ ಅಭಿನಯದ ಬಹುನಿರೀಕ್ಷಿತ ‘ಯಲಾಕುನ್ನಿ’ ಚಿತ್ರ ತೆರೆಗೆ..!

ಸೆನ್ಸೇಷನಲ್‌ ಸ್ಟಾರ್‌ ಕೋಮಲ್‌ ‘ಯಲಾಕುನ್ನಿ’ ಎನ್ನುತ್ತಾ ‘ವಜ್ರಮುನಿ’ಯಾಗಿ ತೆರೆಗೆ ಬರಲು ಸಜ್ಜಾಗಿದ್ದು, ‘ಯಲಾಕುನ್ನಿ’ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿರವರು ನಿರ್ಮಿಸಿರುವ, ಹೊಸ ಪ್ರತಿಭೆ NR ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿರುವ, ಖ್ಯಾತ ನಟ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ “ಯಲಾಕುನ್ನಿ” ಚಿತ್ರ ಅಕ್ಟೋಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರದಲ್ಲಿ ಕೋಮಲ್ ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಟೈಟಲ್ ಅಡಿಯಲ್ಲಿ “ಮೇರಾ ನಾಮ್ ವಜ್ರಮುನಿ, ಎಂದು ಬರೆಯಲಾಗಿದ್ದು, ಚಿತ್ರ ಪ್ರೇಕ್ಷಕರನ್ನು, ವಿಶೇಷವಾಗಿ ವಜ್ರಮುನಿಯವರ ಅಭಿಮಾನಿಗಳನ್ನು ಸೆಳೆಯುವುದು ಖಚಿತ ಎಂದು ಹೇಳಲಾಗುತ್ತಿದೆ. ಹಳ್ಳಿಗಾಡಿನ ಹಿನ್ನಲೆಯಲ್ಲಿ ಮೂಡಿಬಂದಿರುವ ಯಲಾ ಕುನ್ನಿ ಚಿತ್ರಕ್ಕೆ ಧರ್ಮ ವಿಶ್ ಅವರ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನ ಮತ್ತು ಹಾಲೇಶ್ ಭದ್ರಾವತಿಯವರ ಛಾಯಾಗ್ರಹಣವಿದೆ. ಮುರಳಿ ಮಾಸ್ತರ್ ನೃತ್ಯ ನಿರ್ದೇಶನ ಮಾಡಿದ್ದು, ನರಸಿಂಹ ಮಾಸ್ಟರ್ ಸಾಹಸ ದೃಶ್ಯ ನಿರ್ವಹಿಸಿದ್ದಾರೆ.

ತಾರಾಗಣದಲ್ಲಿ ಬಹುಮುಖ ಮತ್ತು ಅನುಭವಿ ನಟರಾದ ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಶಿವರಾಜ್ ಕೆ ಆರ್ ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಸುಮನ್ ನಗರ್ಕರ್, ಮಾನಸಿ ಸುಧೀರ್, ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ, ರಘು ರಮಣಕೊಪ್ಪ, ಮಹಾಂತೇಶ್ ಮುಂತಾದವರು ನಟಿಸಿದ್ದಾರೆ. ಇವರ ಜೊತೆಗೆ, ವಜ್ರಮುನಿಯವರ ಮೊಮ್ಮಗ ಆಕರ್ಶ್, ನಟ ಮಯೂರ್ ಪಟೇಲ್ ಅಭಿನಯಿಸಿದ್ದಾರೆ. ನಿಸರ್ಗ ಅಪ್ಪಣ್ಣ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು‌, ಮೂರು ಹಾಡುಗಳನ್ನು ನಿರ್ದೇಶಕರು ಹಾಗೂ ಒಂದು ಹಾಡನ್ನು ಪ್ರಮೋದ್ ಮರವಂತೆ ‌ಬರೆದಿದ್ದಾರೆ.

ಇದನ್ನೂ ಓದಿ : ಇಂದಿನಿಂದ ಬೆಂಗಳೂರಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್​ ಸರಣಿ.. ಮಳೆಯಿಂದ ಪಂದ್ಯ ಆರಂಭವಾಗುವುದೇ ಅನುಮಾನ?

 

 

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here