ಕೋಲಾರ : ಕೋಲಾರ ಖಾಸಗಿ ಹೋಟೆಲ್ನಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ, ಕೆಪಿಸಿಸಿ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ MLA ಎದುರೇ ಮುಖಂಡರು ಕೈ-ಕೈ ಮಿಲಾಯಿಸಿರುವ ಘಟನೆ ನಡೆದಿದೆ.
ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರಮೇಶ್ ಕುಮಾರ್ ಸೇರಿ ಹಲವರನ್ನು ಆಹ್ವಾನಿಸಿಲ್ಲ ಎಂದು ಮುಖಂಡರು ಗದ್ದಲ ಎಬ್ಬಿಸಿದರು. ಶಾಸಕ ಕೊತ್ತೂರು ಮಂಜುನಾಥ್ ಎದುರೇ ಮುಖಂಡರು ಕೈ-ಕೈ ಮಿಲಾಯಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ನಾರಾಯಣಸ್ವಾಮಿ ಕರೆದಿದ್ದ ಸಭೆಯಲ್ಲಿ ಸಿಎಂ ರಾಜಕೀಯ ಸಲಹೆಗಾರ ನಜೀರ್ ಅಹ್ಮದ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, MLC ಅನಿಲ್ಕುಮಾರ್ ಇದ್ದರು. ಇನ್ನು ಕೆಲವರು ಕಾಂಗ್ರೆಸ್ಗೆ ದ್ರೋಹ ಬಗೆದವರಿಗೆ ಮಣೆ ಹಾಕಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ನಿಮ್ಮಂತೆ ಭಂಡತನದ ರಾಜಕಾರಣ ನಾನ್ ಮಾಡಲ್ಲ – ಸಿದ್ದು ವಿರುದ್ದ ಗುಡುಗಿದ ಹೆಚ್ಡಿಕೆ..!
Post Views: 83