ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ದಿನಕ್ಕೊಂದು ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ರಜತ್ ಮತ್ತು ಧನರಾಜ್ ಮಧ್ಯೆ ಫೈಟ್ ಜೋರಾಗಿಯೇ ನಡೆದಿದೆ. ಇಂದಿನ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಗರಂ ಆಗಿದ್ದು, ರಜತ್ ಕಿಶನ್ ಹಾಗೂ ಧನರಾಜ್ ಇಬ್ಬರಿಗೂ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಧನರಾಜ್ ಹಾಗೂ ರಜತ್, ಹುಲಿ ಸಿಂಹ ಆಗೊಕ್ಕೆ ಬಂದಿದ್ದೀರಾ? ಮನುಷ್ಯರಾಗೋಕಾ? ಧನರಾಜ್, ನೀವು ರಜತ್ ಅವರ ಕೆನ್ನೆ ಮುಟ್ಟಿ ಪ್ರವೋಕ್ ಮಾಡುವ ಅಗತ್ಯ ಏನಿತ್ತು? ರಜತ್ ನಿಮ್ಮ ನಾಲಿಗೆ ಮೇಲೆ ನಿಗಾ ಇರಲಿ ಎಂದು ಕಿಚ್ಚ ವಾರ್ನಿಂಗ್ ಕೊಟ್ಟಿದ್ದಾರೆ. ಈ ವೇಳೆ ರಜತ್ ನಾನು ಅಷ್ಟೇನು ಕೆಟ್ಟದ್ದಾಗಿ ಮಾತನಾಡಿಲ್ಲ ಎಂದಿದ್ದಾರೆ. ಅದಕ್ಕೆ ಸುದೀಪ್ ಅವರು ನಿಮ್ಮ ಪ್ರಕಾರ ಕೆಟ್ಟ ಮಾತುಗಳು ಯಾವುದೆಲ್ಲ ಎಂಬುದು ಬುಕ್ ಅಲ್ಲಿ ಬರೆದುಕೊಡಿ ಎಂದಿದ್ದಾರೆ ಕಿಚ್ಚ.
ಬಿಗ್ ಬಾಸ್ ಈಗ ಪನಿಷ್‌ಮೆಂಟ್ ಕೊಡುತ್ತೆ ಎಂದು ರಜತ್ ಅವರನ್ನು ಪಂಜರದಲ್ಲಿ ಹಾಕಿದ್ದಾರೆ. ಧನರಾಜ್ ಅವರು ರಜತ್ ಎಲ್ಲೇ ಹೋಗಬೇಕು ಎಂದರೂ, ಅವರನ್ನು ಎಳೆದುಕೊಂಡು ಹೋಗಬೇಕು. ಈ ಪನಿಷ್‌ಮೆಂಟ್ ನೋಡಿ ರಜತ್ ಹಾಗೂ ಧನರಾಜ್ ಗಾಬರಿಯಾಗಿದ್ದಾರೆ.
ಇದನ್ನೂ ಓದಿ : ಹಾವೇರಿ : ದೇವರಿಗೆ ಹಚ್ಚಿದ ದೀಪದಿಂದ ಧಗಧಗನೆ ಹೊತ್ತಿ ಉರಿದ 2 ಮನೆಗಳು..!