ನಟ ಕಿಚ್ಚ ಸುದೀಪ್ ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬ ಆಚರಿಸುವ ಹಿನ್ನೆಲೆಯಿಂದಾಗಿ ಪ್ರೆಸ್ ಮೀಟ್ ಕರೆದಿದ್ದರು. ಈ ವೇಳೆ ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಬಳ್ಳಾರಿ ಜೈಲು ಸೇರಿರುವ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ದರ್ಶನ್ ಕೇಸ್ ಬಗ್ಗೆ ನಾನ್ಯಾಕೆ ಮಾತನಾಡಲಿ ? ದರ್ಶನ್ ಕೇಸ್ ನೋಡಿಕೊಳ್ಳಲು ಪತ್ನಿ ಇದ್ದಾರೆ, ಊರು ತುಂಬಾ ಫ್ಯಾನ್ಸ್ ಇದ್ದಾರೆ. ನಾನೇನು ಜೈಲಿನೊಳಗೆ ಹೋಗಿ ಕರೆದುಕೊಂಡು ಬರ್ಲಾ?ಅಥವಾ ನಾನೇ ಒಳಗೆ ಹೋಗ್ಬೇಕಾ ? ಎಂದು ದರ್ಶನ್ಗೆ ಗುಮ್ಮಿದ್ದಾರೆ.
ನಾನು ಮಾತನಾಡಿ ಅವರ ಕುಟುಂಬಕ್ಕೆ ಬೇಜಾರ ಮಾಡಲ್ಲ. ನಮ್ಮಲ್ಲಿ ಉತ್ತಮವಾಗಿರುವ ಕಾನೂನು ವ್ಯವಸ್ಥೆಯಿದೆ. ನಾನು ಮೊದಲಿನಿಂದ ಮಾತನಾಡಿಕೊಂಡಿದ್ರೆ ನಾನು ನಿಜವಾಗಲೂ ದರ್ಶನ್ ಹೋಗಿ ಮಾತನಾಡಿಸುತ್ತಿದೆ. ನಾವಿಬ್ರು ಸರಿಯಿಲ್ಲ, ನಾಟಕೀಯವಾಗಿ ಇರೋಕೆ ಬರಲ್ಲ. ನಮ್ ಇಬ್ರು ಟೆಸ್ಟ್ ರೂಟ್ ಎಲ್ಲ ಬೇರೆ ಬೇರೆ. ಇನ್ನೊಬ್ರುನ ಸರಿಮಾಡೋ ಶಕ್ತಿ ನನಗಿಲ್ಲ. ಅವರಿಗೆ ಪಬ್ಲಿಕ್ಲ್ಲಿ ಅವಮಾನ ಆಗಿದ್ದಾಗ ನಾನು ಟ್ವಿಟ್ ಮಾಡಿದ್ದೆ ಎಂದಿದ್ದಾರೆ.
ನಂತರ ಮಾತನಾಡಿ, ದರ್ಶನ್ ಮಾಡಿರೋದು ತಪ್ಪು ಅಂತ ನಾವು ಹೇಗೆ ಹೇಳೊಕೆ ಆಗುತ್ತೆ, ಕಾನೂನು ಇದೆ ಅದನ್ನು ನಂಬಿ. ತನಿಖೆ ಆಗ್ತಿದೆ, ಸತ್ಯ ಗೊತ್ತಿಲ್ಲದೇ ಏನೂ ಮಾತಾಡೋಕೆ ಆಗಲ್ಲ. ನಾವು ಯಾಕೆ ಕಾನೂನು ಮೀರಿ ಹೇಳಬೇಕು. ನಾವು ಏನೋ ಹೇಳೋದು, ಅದು ತಪ್ಪಾಗೋದು. ರಿಸೆಲ್ಟ್ಗಾಗಿ ಕಾಯಬೇಕು.
ಇದನ್ನೂ ಓದಿ : ಲೈಫ್ಲ್ಲಿ ನಾನು 10ವರ್ಷ ಬಿಗ್ಬಾಸ್ಗೋಸ್ಕರ ಡೆಡಿಕೇಟ್ ಮಾಡಿದ್ದೇನೆ – ನಟ ಕಿಚ್ಚ ಸುದೀಪ್..!