ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಭರ್ಜರಿಯಾಗಿ 2ನೇ ವಾರದತ್ತ ಮುನ್ನುಗ್ಗುತ್ತಿದೆ. ಈ ವರ್ಷದ ಸೂಪರ್ ಹಿಟ್ ಕನ್ನಡ ಸಿನಿಮಾಗಳ ಸಾಲಿನಲ್ಲಿ ಮ್ಯಾಕ್ಸ್ ಮೊದಲ ಸ್ಥಾನಕ್ಕೇರಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಕಿಚ್ಚನ ಮ್ಯಾಕ್ಸಿಮಮ್ ಮನರಂಜನೆಗೆ ಸಿನಿರಸಿಕರು ಫುಲ್ ಫಿದಾ ಆಗಿದ್ದಾರೆ. ಮ್ಯಾಕ್ಸ್ ಸಿನಿಮಾ ಸಕ್ಸಸ್ ಚಿತ್ರತಂಡಕ್ಕೆ ಖುಷಿ ತಂದಿದ್ದು, ಕಳೆದ ರಾತ್ರಿ ನಡೆದ ಸಕ್ಸಸ್ ಮೀಟ್ನಲ್ಲಿ ಸುದೀಪ್ ಅವರು ಚಿತ್ರದ ಒಂದು ಹಾಡಿನಲ್ಲಿರುವ ‘ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ’ ಲೈನ್ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಪ್ರಪಂಚದಲ್ಲಿ ಲೋಫರ್ಗಳು ಇರುತ್ತಾರೆ. ಹೆಣ್ಮಕ್ಕಳನ್ನು ಎತ್ತಾಕಿಕೊಂಡು ಹೋಗಿ ಡಿಕ್ಕಿಯಲ್ಲಿ ಹಾಕಿಕೊಳ್ತಾರೆ. ಅಂಥವರಿಗೆ ಹೇಳಿದ್ದು ಅಪ್ಪಂಗೆ ಹುಟ್ಟಿದ್ರೆ ಬಾರೋ ಅಂತ. ಒಳ್ಳೆಯವರಿಗೆ ಆ ಮಾತು ಹೇಳಿಲ್ಲ. ಮಿಸ್ಟೇಕ್ ಮಾಡಿಕೊಳ್ಳಬೇಕು. ಬೇರೆ ಹೀರೋಗಳಿಗೆ ಟಾಂಟ್ ಕೊಟ್ಟಿದ್ದಲ್ಲ. ಸಿನಿಮಾದಲ್ಲಿನ ವಿಲನ್ ಪಾತ್ರಕ್ಕೆ ಹೇಳಿದ್ದು. ನಿಮ್ಮ ಮನೆಯ ಹೆಣ್ಮಕ್ಕಳಿಗೆ ರಸ್ತೆಯಲ್ಲಿ ಯಾರಾದರೂ ತೊಂದರೆ ಕೊಟ್ಟರೆ ಶುದ್ಧ ಕನ್ನಡಲ್ಲಿ ಮಾತನಾಡುತ್ತೇವಾ? ಬಿಗ್ ಬಾಸ್ ಸಂದರ್ಭ ಬೇರೆ. ಇದು ಬೇರೆ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ‘ಮ್ಯಾಕ್ಸ್’ ಸಿನಿಮಾ ಕ್ರಿಸ್‌ಮಸ್ ಸಂಭ್ರಮದಲ್ಲಿ ಡಿಸೆಂಬರ್ 25ಕ್ಕೆ ತೆರೆಗೆ ಬಂದಿತ್ತು. ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಆಕ್ಷನ್ ಅದಕ್ಕೆ ದೊಡ್ಡ ಶಕ್ತಿಯಾಗಿದೆ. ಬಹಳ ದಿನಗಳ ಬಳಿಕ ಕಿಚ್ಚನನ್ನು ರಗಡ್ ಅವತಾರದಲ್ಲಿ ಕಣ್ತುಂಬಿಕೊಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.
ಇದನ್ನೂ ಓದಿ : IPS ಅಧಿಕಾರಿ ಹೇಮಂತ್ ನಿಂಬಾಳ್ಕರ್ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಾಲುಗಳೊಂದಿಗೆ ಶುಭಕೋರಿದ ಪತ್ನಿ ಅಂಜಲಿ ನಿಂಬಾಳ್ಕರ್..!