Download Our App

Follow us

Home » ಸಿನಿಮಾ » ಅಮ್ಮನ ಅಗಲಿಕೆಯ ದುಃಖದಲ್ಲಿರುವ ಸುದೀಪ್ – ಬಿಗ್​ಬಾಸ್ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ..!

ಅಮ್ಮನ ಅಗಲಿಕೆಯ ದುಃಖದಲ್ಲಿರುವ ಸುದೀಪ್ – ಬಿಗ್​ಬಾಸ್ ವೇದಿಕೆಯಲ್ಲೇ ಕಣ್ಣೀರಿಟ್ಟ ಕಿಚ್ಚ..!

ಬಿಗ್‌ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಈ ಬಾರಿ ಮತ್ತೆ ಕಿಚ್ಚ ಸುದೀಪ್ ವೇದಿಕೆ ಮೇಲೆ ಬಂದಿದ್ದಾರೆ. ಇದೀಗ ಬಿಡುಗಡೆಯಾದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ತಾಯಿಗೆ ಎಲ್ಲರೂ ನಮನ ಸಲ್ಲಿಸುತ್ತಿರುವ ದೃಶ್ಯ ಕಂಡುಬಂದಿದೆ. ಹಾಗೆಯೇ ವಾಸುಕಿ ವೈಭವ್ ಕೂಡ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇನ್ನು ಬಿಗ್‌ ಬಾಸ್‌ ಕಿಚ್ಚ ಸುದೀಪ್ ಅವರಿಗೆ ಸಾಂತ್ವನ ನೀಡಿದ್ದಾರೆ.

ಬಿಗ್​ಬಾಸ್ ವೇದಿಕೆ ಮೇಲಿದ್ದಾಗಲೇ ಸುದೀಪ್​ರ ತಾಯಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಆ ನಂತರ ಅವರು ಮರಳಲಿಲ್ಲ. ತಾಯಿ ನಿಧನವಾದ ನೋವಿನಲ್ಲಿಯೇ ಸುದೀಪ್ ಬಿಗ್​ಬಾಸ್​ ವೇದಿಕೆಗೆ ಮರಳಿದ್ದಾರೆ. ಬಿಗ್​ಬಾಸ್​ ಕಡೆಯಿಂದ ಸುದೀಪ್ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.

ಸದ್ಯ ಮನಸ್ಸಿನಲ್ಲಿ ಅಪಾರವಾದ ನೋವನ್ನು ತುಂಬಿಕೊಂಡಿರುವ ಸುದೀಪ್ ಅವರು ಭಾರವಾದ ಮನದಲ್ಲೇ ಬಿಗ್ ಬಾಸ್ ವೇದಿಕೆಗೆ ಬಂದಿದ್ದಾರೆ. ಇದೇ ವೇಳೆ ಸುದೀಪ್ ಅವರ ‘ಕೋಟಿಗೊಬ್ಬ 2’ ಸಿನಿಮಾದ ‘ಪರಪಂಚ ನೀನೇ ನನ್ನ ಪರಪಂಚ ನೀನೇ..’ ಹಾಡನ್ನು ಗಾಯಕ ವಾಸುಕಿ ವೈಭವ್ ಅವರು ಹಾಡಿದ್ದಾರೆ. ಎಲ್ಇಡಿ ಮೇಲೆ ಕಾಣಿಸುತ್ತಿದ್ದ ತಾಯಿಯ ಫೋಟೋದ ಎದುರು ಸುದೀಪ್ ಅವರು ಭಾವುಕರಾಗಿ ವೇದಿಕೆ ಮೇಲೆ ನಿಂತಿದ್ದಾರೆ.

ಇದೇ ವೇಲೆ ಬಿಗ್ ಬಾಸ್‌ ಕಡೆಯಿಂದ ಒಂದು ಸಂದೇಶ ಕೂಡ ಬಂದಿದೆ. ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯದಂತಹ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆಗೂ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾರದ ಭಾರ ಎಂದು ಬಿಗ್ ಬಾಸ್ ಸಂತಾಪ ಸೂಚಿಸಿದ್ದಾರೆ. ತಾಯಿ ಫೋಟೋ ನೋಡಿ ಸುದೀಪ್ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ : ಗ್ಯಾರಂಟಿ ಯೋಜನೆ ವಿರೋಧಿಸಿದ್ದು ಕಾಂಗ್ರೆಸ್​ನವರೇ – ಆರ್​​.ಅಶೋಕ್ ಕಿಡಿ..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here