Download Our App

Follow us

Home » ರಾಜಕೀಯ » ಮ್ಯಾಕ್ಸ್ ಸಿನಿಮಾನ ಬೆವರಲ್ಲ ರಕ್ತ ಸುರಿಸಿ ಮಾಡಿದ್ದೇವೆ – ಹೀಗಂದಿದ್ಯಾಕೆ ಕಿಚ್ಚ ಸುದೀಪ್?

ಮ್ಯಾಕ್ಸ್ ಸಿನಿಮಾನ ಬೆವರಲ್ಲ ರಕ್ತ ಸುರಿಸಿ ಮಾಡಿದ್ದೇವೆ – ಹೀಗಂದಿದ್ಯಾಕೆ ಕಿಚ್ಚ ಸುದೀಪ್?

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಮ್ಯಾಕ್ಸ್’​ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಅಮೋಘ ಅಭಿನಯ, ವ್ಯಕ್ತಿತ್ವ, ನಡೆನುಡಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕಿಚ್ಚನ ಮುಂದಿನ ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಸಜ್ಜಾಗಿದ್ದಾರೆ. ಇದೇ ಡಿಸೆಂಬರ್ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಬಿಟಿವಿಗೆ ನೀಡಿದ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಮ್ಯಾಕ್ಸ್ ಶೂಟಿಂಗ್​​ ಎಕ್ಸ್​ಪಿರಿಯನ್ಸ್​​ ಬಗ್ಗೆ ಹೇಳಿದ್ದಾರೆ. ಮ್ಯಾಕ್ಸ್ ಶೂಟಿಂಗ್ ಮಹಾಬಲಿಪುರಂ, ಚೆನ್ನೈ ಸೆಟ್​​ನಲ್ಲಿ ಆಗಿದೆ. ಈ ಸಿನಿಮಾನ ಬರೀ ಬೆವರಲ್ಲ ರಕ್ತ ಸುರಿಸಿ ಮಾಡಿದ್ದೇವೆ, ಇದು ಕಂಪ್ಲೀಟ್ ನೈಟ್ ಸಿನಿಮಾ. ಮ್ಯಾಕ್ಸ್​​ ಅನ್ನೋ ಟೈಟಲ್​​ನ ಕ್ಯಾರೆಕ್ಟರ್​ ಮೇಲೆ ಇಟ್ಟಿದ್ದಾರೆ. ಇದು ಒಂದು ರಾತ್ರಿಯಲ್ಲಿ ನಡೆದ ಕಥೆಯಾಗಿದೆ. ಬೆಳಿಗ್ಗೆಯಿಂದ ರಾತ್ರಿವರೆಗೆ ಏನೆಲ್ಲಾ ಆಗುತ್ತೆ ಅದ್ರ ಮೇಲೆ ಕಥೆನೇ ಹುಟ್ಟಿಕೊಂಡಿದೆ. ಅದ್ನ ನಿರ್ದೇಶಕ ವಿಜಯ್​​ ಅವ್ರು ಅದ್ನ ಡೈರೆಕ್ಟ್ ಮಾಡ್ದಾಗ ತುಂಬಾ ಖುಷಿಯಾಯ್ತು.

ವಿ ಕ್ರಿಯೇಷನ್ಸ್ ಬ್ಯಾನರ್‌ ಅಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್‍ ನಿರ್ಮಿಸಿರುವ ಈ ಚಿತ್ರಕ್ಕೆ ವಿಜಯ್‍ ಕಾರ್ತಿಕೇಯ ಕಥೆ- ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಮೊದಲು ಪ್ಯಾನ್‍ ಇಂಡಿಯಾದ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್‍ ಸಂಗೀತ ಮತ್ತು ಶೇಖರ್ ‍ಚಂದ್ರ ಛಾಯಾಗ್ರಹಣವಿದೆ.

ಇದನ್ನೂ ಓದಿ : ಲಕ್ಷ್ಮಿ ಹೆಬ್ಬಾಳ್ಕರ್​ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪ – ಅರೆಸ್ಟ್ ಆಗ್ತಾರಾ ಬಿಜೆಪಿ MLC ಸಿ.ಟಿ ರವಿ?

Leave a Comment

DG Ad

RELATED LATEST NEWS

Top Headlines

ರೋಮ್ಯಾನ್ಸ್ ಸೀನ್​ ಶೂಟಿಂಗ್ ಮಾಡುವಾಗ ಕಂಟ್ರೋಲ್ ತಪ್ಪಿದ್ರಾ ವರುಣ್ ಧವನ್ ? – ನಟಿ ಜೊತೆಗಿನ ಹಾಟ್​ ವಿಡಿಯೋ ಲೀಕ್​!

ಮುಂಬೈ : ಬಾಲಿವುಡ್​ನಲ್ಲಿ ಯಂಗ್ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವರುಣ್ ಧವನ್ ಸಿನಿಮಾದ ರೋಮ್ಯಾನ್ಸ್ ಸೀನ್​ ಶೂಟಿಂಗ್ ವೇಳೆ ಕಂಟ್ರೋಲ್ ತಪ್ಪಿದ್ರಾ ಎಂಬ ಚರ್ಚೆಗಳು ಶುರುವಾಗಿವೆ. ನಟ

Live Cricket

Add Your Heading Text Here