ಬೆಂಗಳೂರು : ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್ಗೆ ಬಲಿಯಾಗಿದ್ದಾನೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲಪ್ಪುರಂನ ವಿದ್ಯಾರ್ಥಿ ಊರಿಗೆ ಹೋಗಿದ್ದಾಗ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಕಳೆದ ವಾರ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಆತನ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆಯಲ್ಲಿ ನಿಫಾ ದೃಢಪಟ್ಟಿದೆ. ಹೀಗಾಗಿ ಕೇರಳ, ಕರ್ನಾಟಕದಲ್ಲೂ ನಿಫಾ ಅಲರ್ಟ್ ಮಾಡಲಾಗಿದೆ. ವಿದ್ಯಾರ್ಥಿಯ ಸಂಪರ್ಕದಲ್ಲಿದ್ದವರನ್ನೂ ಪತ್ತೆ ಮಾಡಿ ನಿಗಾ ಇಡಲಾಗಿದೆ. ಈವರೆಗೂ ವಿದ್ಯಾರ್ಥಿ ಜೊತೆ 150ಕ್ಕೂ ಹೆಚ್ಚು ಮಂದಿ ಸಂಪರ್ಕದಲ್ಲಿರೋದು ಪತ್ತೆಯಾಗಿದೆ. ಸೋಂಕು ಹರಡದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
ಈ ಸೋಂಕಿನ ರೋಗ ಲಕ್ಷಣಗಳೇನು? ನಿಫಾ ಸೋಂಕು ಕಾಣಿಸಿಕೊಂಡರೆ ಜ್ವರ, ಅತಿಯಾದ ತಲೆನೋವು, ಮಾಂಸಖಂಡಗಳ ನೋವು ಕಂಡು ಬಂದು ಆನಂತರ ಉಸಿರಾಟ ಸಮಸ್ಯೆಗಳು ಗೋಚರಿಸುತ್ತವೆ. ಮನುಷ್ಯನಿಂದ ಮನುಷ್ಯನಿಗೆ ನಿಫಾ ಸೋಂಕು ಹರಡುತ್ತದೆ. ಸದ್ಯಕ್ಕೆ ನಿಫಾ ಸೋಂಕಿಗೆ ಯಾವುದೇ ನಿರ್ದಿಷ್ಟವಾದ ಔಷಧಿ ಇಲ್ಲ.
ಇದನ್ನೂ ಓದಿ : ಕಾಸ್ಟಿಂಗ್ ಕೌಚ್ ಸುನಾಮಿ – ಇಂದು ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್ನಲ್ಲಿ ಮೆಗಾ ಮೀಟಿಂಗ್..