ದಕ್ಷಿಣ ಭಾರತದ ಸ್ಟಾರ್ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ಗೆ ಮದುವೆ ನಿಶ್ಚಯವಾಗಿದೆ. ‘ಮಹಾನಟಿ’ ಕೀರ್ತಿ ಸುರೇಶ್ ಮದುವೆ ಬಗ್ಗೆ ಹಲವು ಬಾರಿ ಸುದ್ದಿಗಳು ಹರಿದಾಡಿದ್ದವು. ತಮಿಳಿನ ಖ್ಯಾತ ಸಂಗೀತ ನಿರ್ದೇಶಕರನ್ನು ಕೀರ್ತಿ ಸುರೇಶ್ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಮಾತ್ರವಲ್ಲ ಇನ್ನೂ ಕೆಲವು ನಟ, ನಿರ್ದೇಶಕರ ಜೊತೆಗೂ ಸಹ ಕೀರ್ತಿ ಸುರೇಶ್ ಹೆಸರು ಕೇಳಿ ಬಂದಿತ್ತು.
ಇದೀಗ ಕೊನೆಗೂ ನಟಿ ಕೀರ್ತಿ ಸುರೇಶ್ ಮದುವೆ ನಿಗದಿ ಆಗಿದೆ. ಹೌದು.. ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯ ಆಂಟೊನಿ ತಟ್ಟಿಲ್ ಅವರನ್ನು ವಿವಾಹವಾಗಲಿದ್ದಾರೆ. ಆಂಟೊನಿ ಹಾಗೂ ಕೀರ್ತಿ ಸುರೇಶ್ ಸಹಪಾಠಿಗಳಾಗಿದ್ದು, ಒಟ್ಟಿಗೆ ಹೈಸ್ಕೂಲ್ ಶಿಕ್ಷಣವನ್ನು ಮಾಡಿದವರು. ಆಗಿನಿಂದಲೂ ಇವರು ಪ್ರೀತಿಯಲ್ಲಿದ್ದರಂತೆ. ಇದೀಗ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಿದ್ದಾರೆ.
ಈ ಜೋಡಿಯ ವಿವಾಹ ಡಿಸೆಂಬರ್ 11-12 ರಂದು ಗೋವಾದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಕುಟುಂಬಸ್ಥರು ಮತ್ತು ಕೆಲವೇ ಆತ್ಮೀಯರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಲಿದ್ದು, ಆ ನಂತರ ಕೊಚ್ಚಿ ಹಾಗೂ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಯನ್ನು ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆಂಟೊನಿ ತಟ್ಟಿಲ್ ಕೊಚ್ಚಿಯವರಾಗಿದ್ದು, ದುಬೈನಲ್ಲಿ ನೆಲೆಸಿದ್ದಾರೆ. ದುಬೈನಲ್ಲಿ ಕೆಲ ಉದ್ಯಮಗಳನ್ನು ಆಂಟೊನಿ ಹೊಂದಿದ್ದಾರೆ.
ಈ ಹಿಂದೆ ಕೀರ್ತಿ ಹೆಸರು ರಿಯಲ್ ಎಸ್ಟೇಟ್ ಉದ್ಯಮಿ ಫರ್ಹಾನ್ ಬಿನ್ ಲಿಖತ್ ಜೊತೆಗೆ ಕೇಳಿ ಬಂದಿತ್ತು. ಫರ್ಹಾನ್ ಅನ್ನು ಕೀರ್ತಿ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಅನಿರುದ್ಧ್ ರವಿಚಂದ್ರನ್ ಜೊತೆಗೂ ಸಹ ಕೀರ್ತಿ ಹೆಸರು ಕೇಳಿ ಬಂದಿತ್ತು. ಇಬ್ಬರೂ ಆತ್ಮೀಯವಾಗಿರುವ ಚಿತ್ರವೊಂದು ಸಹ ಈ ಹಿಂದೆ ಹರಿದಾಡಿತ್ತು. ಆದರೆ ಕೀರ್ತಿ ಸುರೇಶ್ ಹಾಗೂ ಅನಿರುದ್ಧ್ ರವಿಚಂದ್ರನ್ ಕುಟುಂಬದ ಸದಸ್ಯರು ಈ ಸುದ್ದಿಯನ್ನು ತಳ್ಳಿಹಾಕಿದ್ದರು.
ಕೀರ್ತಿ ಸುರೇಶ್ ನಟನೆಯ ‘ರಘು ತಾತ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಒಟಿಟಿಗೆ ಬಿಡುಗಡೆ ಆಗಿದೆ. ಸಿನಿಮಾ ಅನ್ನು ಹೊಂಬಾಳೆ ನಿರ್ಮಾಣ ಮಾಡಿತ್ತು. ಇದೀಗ ಬಾಲಿವುಡ್ಗೆ ಹಾರಿರುವ ಕೀರ್ತಿ, ವರುಣ್ ಧವನ್ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ‘ರಿವಾಲ್ವರ್ ರೀಟಾ’ ಮತ್ತು ‘ಕಣ್ಣಿವೀದಿ’ ಸಿನಿಮಾಗಳಲ್ಲಿಯೂ ಕೀರ್ತಿ ನಟಿಸುತ್ತಿದ್ದಾರೆ.
ಇದನ್ನೂ ಓದಿ : ಮುಡಾ ಕೇಸ್ : ಎರಡನೇ ಬಾರಿ ದೇವರಾಜುಗೆ ನೋಟಿಸ್ ನೀಡಿದ ಲೋಕಾಯುಕ್ತ..!