Download Our App

Follow us

Home » ಸಿನಿಮಾ » ಮಡನೂರ್ ಮನು ನಟನೆಯ ‘ಕೇದಾರ್ ನಾಥ್ ಕುರಿಫಾರಂ’ ಚಿತ್ರದ ಟ್ರೇಲರ್, ಹಾಡುಗಳು ರಿಲೀಸ್​​..!​​​​

ಮಡನೂರ್ ಮನು ನಟನೆಯ ‘ಕೇದಾರ್ ನಾಥ್ ಕುರಿಫಾರಂ’ ಚಿತ್ರದ ಟ್ರೇಲರ್, ಹಾಡುಗಳು ರಿಲೀಸ್​​..!​​​​

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ “ಕೇದಾರ್ ನಾಥ್ ಕುರಿಫಾರಂ” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಸಮಾರಂಭಕ್ಕೆ ಕಣ್ಣೂರ್ ಜಗದೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಜೆ.ಕೆ.ಮೂವೀಸ್ ಲಾಂಛನದಲ್ಲಿ ಕೆ.ಎಂ ನಟರಾಜ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ರಾಜೇಶ್​​ ಸಾಲುಂಡಿ ಕಥೆ, ಸಂಭಾಷಣೆ ಬರೆದಿದ್ದು, ಶೀನು ಸಾಗರ್ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಬಳಿಕ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಶೀನು ಸಾಗರ್ ಅವರು, ನಾನು “ದುನಿಯಾ” ಸೂರಿ ಅವರ ನಿರ್ದೇಶನದ ಚಿತ್ರಗಳಲ್ಲಿ ನಟನಾಗಿ ಹಾಗೂ ಸಹಾಯಕ ನಿರ್ದೇಶಕನಾಗಿ ಗುರುತಿಸುಕೊಂಡಿದ್ದೆ. ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಬಳಿ ಛಾಯಾಗ್ರಹಣ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದೆ. ನಿರ್ದೇಶಕನಾಗಿ ಇದು ಎರಡನೇ ಚಿತ್ರ. ನಾನು ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನ ರಾಜೇಶ್ ಸಾಲುಂಡಿ ಅವರದು. ಇದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ‌. ಕಾಮಿಡಿ ಥ್ರಿಲ್ಲರ್ ಜಾನರ್ ನ ಕಥಾ ಹಂದರ ಹೊಂದಿರುವ ಈ ಚಿತ್ರ ನೂರು ರೂಪಾಯಿ ಕೊಟ್ಟು ಟಿಕೆಟ್ ಪಡೆದ ಪ್ರೇಕ್ಷಕನಿಗೆ ಯಾವುದೇ ರೀತಿಯ ಬೇಸರ ಮಾಡದೆ ಮನೋರಂಜನೆಯ ಮಹಾಪೂರವನ್ನೇ ಹರಿಸುತ್ತದೆ. ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿದ್ದ ಮಡೆನೂರ್ ಮನು ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಿರ್ಮಾಪಕ ಕೆ.ಎಂ.ನಟರಾಜ್ ಈ ಚಿತ್ರವನ್ನು ಆಗಸ್ಟ್ 30 ರಂದು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ ಎಂದು ನಿರ್ದೇಶಕ ಶೀನು ಸಾಗರ್ ತಿಳಿಸಿದರು.

ನಿರ್ಮಾಪಕ ನಟರಾಜ್ ಮಅತನಾಡಿ, ‘ಕಾಲೇಜ್ ಕುಮಾರ’, ‘ಜಾನ್ ಜಾನಿ ಜನಾರ್ದನ್’ ಚಿತ್ರಗಳಿಗೆ ಸಹ ನಿರ್ಮಾಪಕನಾಗಿದ್ದೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ನಾಯಕಿಯ ತಂದೆಯ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಇನ್ನು ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಮಡೆನೂರ್ ಮನು ಅವರು, ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ನಂತರ ನಾನು ನಟಿಸಿರುವ ಮೊದಲ ಚಿತ್ರವಿದು. ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಮನೋರಂಜನೆಗೆ ಬರವಿಲ್ಲ. ಮಂಜು ನನ್ನ ಪಾತ್ರದ ಹೆಸರು ಎಂದು ತಿಳಿಸಿದರು. ನಾಯಕಿ ಶಿವಾನಿ ಹಾಗೂ ನಟ ಮುತ್ತು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನೃತ್ಯ ನಿರ್ದೇಶಕ ನಾಗಭೂಷಣ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ : ಮೋಸ್ಟ್​ ವಾಂಟೆಡ್​ ಉಗ್ರನ ಅರೆಸ್ಟ್ – ದೆಹಲಿಯಲ್ಲಿ ದೊಡ್ಡ ಸಂಚಿಗೆ ಪ್ಲಾನ್​ ಮಾಡಿದ್ನಾ ಅಲಿ?

Leave a Comment

DG Ad

RELATED LATEST NEWS

Top Headlines

ಮೈಸೂರಿನಲ್ಲಿ ಹಾಡಹಗಲೇ ಮನೆ ಕಳ್ಳತನಕ್ಕೆ ಯತ್ನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ಮೈಸೂರು : ಮೈಸೂರಿನಲ್ಲಿ ಹಾಡುಹಗಲೇ ಮನೆಗಳ್ಳತನಕ್ಕೆ ಯತ್ನಿಸಿದ್ದ ಖದೀಮನ ಕಳ್ಳತನದ ಯತ್ನ ವಿಫಲವಾಗಿದೆ. ಜಿಲ್ಲೆಯ ಬನ್ನೂರಿನ ರಾಮದೇವರ ಬೀದಿಯಲ್ಲಿ ಜಯಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನದ ಯತ್ನ

Live Cricket

Add Your Heading Text Here