ಬೆಂಗಳೂರು : ಕಬಾಬ್ ಸೆಂಟರ್ ಎಡವಟ್ಟಿಗೆ ಆಟೋ, ಬೈಕ್ ಧಗಧಗ ಹೊತ್ತಿ ಉರಿದಿರುವ ಘಟನೆ ವಿವೇಕನಗರದ ಈಜಿಪುರದಲ್ಲಿ ನಡೆದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ರಸ್ತೆ ಪಕ್ಕದಲ್ಲಿ ಕಬಾಬ್ ಮಾರಾಟ ಮಾಡ್ತಿದ್ದ ವ್ಯಾಪಾರಿ ಸಿಲಿಂಡರ್ ಚೇಂಜ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ವೇಳೆ ಗಾಬರಿಗೊಂಡು ಸಿಲಿಂಡರ್ ಮುಂದೆ ತಳ್ಳಿದ್ದಾಗ ಪಾರ್ಕಿಂಗ್ನಲ್ಲಿ ನಿಂತಿದ್ದ ಆಟೋಗೆ ಬೆಂಕಿ ತಗುಲಿದೆ.
ಬಳಿಕ ಪಕ್ಕದಲ್ಲೇ ನಿಂತಿದ್ದ ಎರಡು ಬೈಕ್ಗಳಿಗೂ ತಗುಲಿದ್ದು, ಕ್ಷಣಾರ್ಧದಲ್ಲಿ ಒಂದು ಆಟೋ, ಎರಡು ಬೈಕ್ ಸುಟ್ಟು ಭಸ್ಮವಾಗಿದೆ. ಕೊಂಚ ಯಾಮಾರಿದ್ರೂ ಬೆಂಗಳೂರಲ್ಲಿ ದೊಡ್ಡ ಅನಾಹುತ ಆಗ್ತಿತ್ತು.
ಇದನ್ನೂ ಓದಿ : ‘ವೈಬೋಗ’ ಟೈಟಲ್ ಲಾಂಚ್ – ಹೊಸ ಸಿನಿಮಾ ಕೈಗೆತ್ತಿಕೊಂಡ ನಿರ್ದೇಶಕ ಚಂದ್ರು ಓಬಯ್ಯ..!
Post Views: 191