ಬೆಂಗಳೂರು : ನಿನ್ನೆ ನಡೆದ ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಜೆರ್ಸಿ ಅನಾವರಣ ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬಂದು ಎಲ್ಲರಿಗೂ ಶುಭ ಹಾರೈಸಿದ್ದಾರೆ. ಈ ಟೂರ್ನಿಯಲ್ಲಿ ಸ್ಯಾಂಡಲ್‌ವುಡ್ ತಾರೆಯರು, ಕಿರುತೆರೆ ಕಲಾವಿದರು, ಮಾಧ್ಯಮದವರು ಹಾಗೂ ಟೆಕ್ನಿಷಿಯನ್‌ಗಳು ಆಡುತ್ತಿದ್ದು, ಸೆಪ್ಟೆಂಬರ್ 28-29ರಂದು ಈ ಪಂದ್ಯಾವಳಿಗಳು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮಾತನಾಡಿ, ಸ್ಯಾಂಡಲ್‌ವುಡ್‌ಗೆ ತುಂಬಾನೇ ದೊಡ್ಡ ಇತಿಹಾಸವಿದೆ. ಸದ್ಯದ ಪರಿಸ್ಥಿತಿಯಲ್ಲಿಯೂ ಕನ್ನಡ ಚಿತ್ರರಂಗದ ಕಲಾವಿದರು ಒಟ್ಟಿಗೆ ಸೇರಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂಬ ಸಂದೇಶ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
‘ಕೆಟ್ಟ ಕಾರಣಕ್ಕೆ ನಮ್ಮ ಚಿತ್ರರಂಗ ಸುದ್ದಿ ಆಗುತ್ತಿದೆ ನಿಜ. ಅದರ ನಡುವೆ ಇದು ಒಂದು ಸುಂದರ ಕ್ಷಣ. ಎಲ್ಲರೂ ಇಲ್ಲಿ ಜೊತೆಯಾಗಿ ಸೇರಿರುವುದು ಕನ್ನಡ ಚಿತ್ರರಂಗದ ಬಗ್ಗೆ ಉತ್ತಮ ಸಂದೇಶ ನೀಡುತ್ತೆ. ಚಿತ್ರರಂಗದ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ’ ಎಂದಿದ್ದಾರೆ ಸುದೀಪ್.
ಇದೇ ವೇದಿಕೆ ಮೇಲೆ “ನಾವೆಲ್ಲರೂ ಒಂದೇ. ಯಾರು ಬೇಕಾದರೂ ಸಾವಿರ ಮಾತಾಡಲಿ, ಸಾವಿರ ದೂರುಗಳನ್ನೇ ಸಲ್ಲಿಸಲಿ. ನಮ್ಮ ಚಿತ್ರರಂಗ 78 ವರ್ಷಗಳ ಕಾಲ ಇಲ್ಲಿವರೆಗೂ ಬಂದಿದೆ ಅಂದರೆ, ಅದಕ್ಕೆ ಎಲ್ಲರೂ ಹಾರ್ಡ್ ವರ್ಕ್, ನಂಬಿಕೆ ಎಲ್ಲವೂ ಕೂಡ ಸೇರುತ್ತೆ” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ : ಬೆಳಗಾವಿ : ಗೃಹಲಕ್ಷ್ಮಿ ಹಣ ಕೂಡಿಟ್ಟು ಸ್ವಉದ್ಯೋಗ ಆರಂಭಿಸಿದ ಮಹಿಳೆ..!