ಕಲಬುರಗಿ : ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ವಿಮೋಚನೆಗೊಂಡ ಸ್ಮರಣಾರ್ಥ ಆಚರಿಸಲಾಗುವ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟದ ಇತಿಹಾಸ ನೆನಪಿಸಿ, ಹೋರಾಟಗಾರರ ತ್ಯಾಗ, ಬಲಿದಾನವನ್ನ ಸ್ಮರಿಸಿದ್ದಾರೆ. ಇನ್ನು ಕಲಬುರಗಿಗೆ ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿ ಭಾಗ್ಯ ಸಿಗಲಿದ್ದು, ಕಲ್ಯಾಣ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭರಪೂರ ಘೋಷಣೆ ಮಾಡಿದ್ದಾರೆ.
ಕಲಬುರಗಿಗೆ ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿ ಭಾಗ್ಯ :
- ಸ್ಮಾರ್ಟ್ ಸಿಟಿಯನ್ನಾಗಿ ಮಾಡಲು 1685 ಕೋಟಿ ರೂ. ಯೋಜನೆ
- ಕಲಬುರಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗೆ 200 ಕೋಟಿ ಅನುದಾನ
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲ್ಯಾಣ ಪಥ ರಸ್ತೆ ನಿರ್ಮಾಣ
- 1000 ಕೋಟಿ ರೂ ವೆಚ್ಚದಲ್ಲಿ 1150 ಕಿಮೀ ರಸ್ತೆ ನಿರ್ಮಿಸಲು ಯೋಜನೆ
- ಯಾದಗಿರಿ ಜಿಲ್ಲೆ ಶಹಾಪುರದಲ್ಲಿ 292 ಕೋಟಿ ವೆಚ್ಚದಲ್ಲಿ ಒಳಚರಂಡಿ
- ರಾಯಚೂರಿನಲ್ಲಿ AIIMS ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ
- ರಾಯಚೂರು, ಬಳ್ಳಾರಿಯಲ್ಲಿ Human Milk Bank ಘಟಕಗಳ ಸ್ಥಾಪನೆ
- ಈ ಭಾಗದ ಹುದ್ದೆಗಳಿಗೆ ಬೇಗ ಭರ್ತಿ ಮಾಡಿ ಮುಂಬಡ್ತಿ ಭಾಗ್ಯ
- 7 ಜಿಲ್ಲೆಗಳ ಕುಡಿಯುವ ನೀರಿಗಾಗಿ JJMಅಡಿ 8290 ಕೋಟಿ ಕಾಮಗಾರಿ
ಇದನ್ನೂ ಓದಿ : 74ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ – ಜಗತ್ತೇ ಮೆಚ್ಚಿದ ವಿಶ್ವನಾಯಕನಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ..!
Post Views: 43