ಕಲಬುರಗಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ಗೆ ರಾಜಾತಿಥ್ಯ ನೀಡಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದೇ ರೀತಿ ಇದೀಗ ಕಲಬುರಗಿಯ ಕೇಂದ್ರ ಕಾರಾಗೃಹದಿಂದ ವೈರಲ್ ಆಗಿರುವ ಕೈದಿಗಳ ರಾಜಾತಿಥ್ಯದ ವಿಡಿಯೋ ಹಾಗೂ ಫೋಟೋಗಳು ಬೆಚ್ಚಿ ಬೀಳುವಂತಿದೆ.
ಹೌದು.. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಭಾರೀ ರಾಜಾತಿಥ್ಯವೇ ನಡೆಯುತ್ತಿದೆ. ಜೈಲಿನಲ್ಲೇ ಕೈದಿಗಳು ಎಣ್ಣೆ ಪಾರ್ಟಿ ಮಾಡುತ್ತಿರುವ ವೀಡಿಯೋ ವೈರಲ್ ಆಗಿದ್ದು, ಜೈಲಿನ ಕರ್ಮಕಾಂಡ ಮತ್ತಷ್ಟು ಬಯಲಾಗಿದೆ. ಶಂಕಿತ ಉಗ್ರ ಜುಲ್ಫಿಕರ್, ಶಿವಮೊಗ್ಗ ರೌಡಿಶೀಟರ್ ಬಚ್ಚನ್ ಸೇರಿ ಆರು ನಟೋರಿಯಸ್ ಕೈದಿಗಳ ಶಿಫ್ಟ್ ಬೆನ್ನಲ್ಲೇ ಜೈಲಿನಲ್ಲಿನ ಮತ್ತಷ್ಟು ವೀಡಿಯೋ ವೈರಲ್ ಆಗಿವೆ.
ರಾಶಿ ರಾಶಿ ಸ್ಮಾರ್ಟ್‌ಫೋನ್‌ಗಳು, ಬೀಡಿ-ಸಿಗರೇಟ್ ಪ್ಯಾಕೇಟ್‌ಗಳನ್ನ ಒಂದೇಡೆ ಹಾಕಿರುವ ವೀಡಿಯೋ ಕೂಡ ವೈರಲ್ ಆಗಿದ್ದು, ಜೈಲ್ ಅಧೀಕ್ಷಕಿಯನ್ನ ಟಾರ್ಗೆಟ್ ಮಾಡಿಕೊಂಡು ವೀಡಿಯೋ ರಿಲೀಸ್ ಮಾಡಲಾಗಿದೆ ಎಂದು ಹೇಳಲಾಗಿದೆ. ಜೈಲು ಮುಖ್ಯ ಅಧೀಕ್ಷಕಿಗೆ ಹಣ ನೀಡುವ ಕುರಿತು ಕೈದಿಗಳು ಮಾತುಕತೆ ನಡೆಸಿರುವುದು ಕೂಡ ಬಹಿರಂಗಗೊಂಡಿದೆ.
ಅ.14 ರಂದು ಜೈಲು ಮುಖ್ಯ ಅಧೀಕ್ಷಕಿಯಾಗಿ ಡಾ.ಅನಿತಾ ಅವರು ಅಧಿಕಾರ ಸ್ವೀಕರಿಸಿದ್ದರು. ಅ.16 ರಿಂದ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಜೈಲ್ ಅಧೀಕ್ಷಕಿ ಅನಿತಾ ಮುಂದಾಗಿದ್ದರು.
ಹಾಗಾಗಿ ಕೈದಿಗಳು ರಾಶಿ ರಾಶಿ ಗುಟ್ಕಾ, ಬೀಡಿ, ಸಿಗರೇಟ್ ಗುಡ್ಡೆ ಹಾಕಿ ವೀಡಿಯೋ ಮಾಡಿದ್ದು, ಜೈಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದ ಜೈಲ್ ಅಧೀಕ್ಷಕಿ ಅನೀತಾರನ್ನ ಟಾರ್ಗೆಟ್ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ತಮ್ಮ ಹೈಪೈ ಜೀವನಕ್ಕೆ ಬ್ರೇಕ್ ಬಿದ್ದ ಹಿನ್ನೆಲೆ ಅನಿತಾರನ್ನ ವರ್ಗಾವಣೆ ಮಾಡಿಸಲು ಕೈದಿಗಳು ಷಡ್ಯಂತ್ರ ನಡಸಿದ್ರಾ ಅನ್ನೋ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ : ಹೊಸ ವರ್ಷಾಚರಣೆಗೆ ದಿನಗಣನೆ : ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಕಟ್ಟೆಚ್ಚರ..!