Download Our App

Follow us

Home » ಜಿಲ್ಲೆ » ಕಲಬುರಗಿ ಸೆಂಟ್ರಲ್ ಜೈಲ್ ಮೇಲೆ ಪೊಲೀಸರಿಂದ ದಾಳಿ – 2 ಮೊಬೈಲ್, ಸಿಗರೇಟ್​, ರಾಡ್​ ಸೇರಿದಂತೆ ಹಲವು ವಸ್ತು ಜಪ್ತಿ..!

ಕಲಬುರಗಿ ಸೆಂಟ್ರಲ್ ಜೈಲ್ ಮೇಲೆ ಪೊಲೀಸರಿಂದ ದಾಳಿ – 2 ಮೊಬೈಲ್, ಸಿಗರೇಟ್​, ರಾಡ್​ ಸೇರಿದಂತೆ ಹಲವು ವಸ್ತು ಜಪ್ತಿ..!

ಕಲಬುರಗಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಮೊದಲು ನಟ ದರ್ಶನ್​​ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಈ ವೇಳೆ ಅವರಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದರು. ಇದೀಗ ಕಲಬುರಗಿ ಕೇಂದ್ರ ಕಾರಾಗೃಹದಲ್ಲೂ ಕೂಡ ಕೈದಿಗಳು ಮೊಬೈಲ್, ಗುಟ್ಕಾ ಸೇರಿದಂತೆ ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ, ಕೈದಿಗಳಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ನಿನ್ನೆ ಕಮಿಷನರ್ ಡಾ. ಶರಣಪ್ಪ ನೇತೃತ್ವದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಲಾಗಿದೆ. ಡಿಸಿಪಿ ಕನ್ನಿಕಾ ಹಾಗೂ 80ಕ್ಕೂ ಹೆಚ್ಚು ಅಧಿಕಾರಿಗಳು ಜೈಲ್​ ಮೇಲೆ ರೇಡ್​ ನಡೆಸಿ ಪರೀಶಿಲನೆ ನಡೆಸಿದ್ದಾರೆ.

ಈ ವೇಳೆ ಎರಡು ಮೊಬೈಲ್, ಬೀಡಿ, ಸಿಗರೇಟ್, ಗುಟ್ಕಾ ಪ್ಯಾಕೆಟ್​ಗಳು ಹಾಗೂ 2 ಕಬ್ಬಿಣದ ರಾಡ್​ಗಳನ್ನು ಪೋಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ಕಮಿಷನರ್ ಶರಣಪ್ಪ ಮಾತನಾಡಿದ್ದು, ದಾಳಿಯ ವೇಳೆ ಕೆಲವು ಮಹತ್ವದ ಸಾಕ್ಷಿಗಳು ಸಿಕ್ಕಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ದೇವರ ಭಜನೆಯಲ್ಲಿ ಮಗ್ನರಾಗಿದ್ದ ಮಹಿಳೆಯ ಸರ ಕದ್ದು ಖತರ್ನಕ್ ಕಳ್ಳ ಎಸ್ಕೇಪ್ – FIR ದಾಖಲು..!

Leave a Comment

DG Ad

RELATED LATEST NEWS

Top Headlines

ಕಟೀಲು ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದ ನಟ ಉಪೇಂದ್ರ..!

ಸ್ಯಾಂಡಲ್​ವುಡ್​ನ ರಿಯಲ್ ಸ್ಟಾರ್, ನಟ ಉಪೇಂದ್ರ ಅಭಿನಯದ ‘ಯುಐ’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ‘ಯುಐ’ ಟೀಮ್ ಜೊತೆ ನಟ ಉಪೇಂದ್ರ

Live Cricket

Add Your Heading Text Here