ಕಲಬುರುಗಿ : ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾದ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಾಗಣಗೇರಾ ಗ್ರಾಮದಲ್ಲಿ ನಡೆದಿದೆ. ಗೊಲ್ಲಾಳಪ್ಪ ನಾಗಾವಿ ಎಂಬುವರಿಗೆ ಸೇರಿದ ಕಬ್ಬಿನ ಬೆಳೆ ನಾಶವಾಗಿದೆ.
ಇನ್ನೇನು ಕಟಾವಿಗೆ ರೆಡಿಯಾಗಿದ್ದ ಕಬ್ಬು ಜೆಸ್ಕಾಂ ನಿರ್ಲಕ್ಷ್ಯಕ್ಕೆ ಸುಟ್ಟ ಕರಕಲಾಗಿದೆ. ಜಮೀನಿನಲ್ಲಿ ಹೈಟೆನ್ಶನ್ ವೈರ್ ಕೆಳಗಡೆ ಜೋತು ಬಿದ್ದಿದ್ದು, ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದ್ರು ಸಮಸ್ಯೆ ಬಗೆಹರಿಲಿಲ್ಲ. ಹೀಗಾಗಿಯೇ ಕಬ್ಬಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ಜಮೀನು ಮಾಲೀಕ ಆಕ್ರೋಶ ಹೊರಹಾಕಿದ್ದಾನೆ.
ಇದನ್ನೂ ಓದಿ : ನಟಿ ಸಮಂತಾ ರುತ್ ಪ್ರಭು ತಂದೆ ಜೋಸೆಫ್ ಪ್ರಭು ನಿಧನ..!
Post Views: 89