ಬಳ್ಳಾರಿ : ನಟ ದರ್ಶನ್ ಅಂಡ್ ಗ್ಯಾಂಗ್‌ನ ಅಟ್ಟಹಾಸದ ಕಂಪ್ಲೀಟ್ ರಿಪೋರ್ಟ್ ಕೋರ್ಟ್‌ಗೆ ಸಲ್ಲಿಕೆಯಾಗಿದೆ. 3991 ಪುಟಗಳ ಆರೋಪ ಪಟ್ಟಿಯಲ್ಲಿ ದರ್ಶನ್ ಗ್ಯಾಂಗ್‌ನ ರಕ್ಕಸತನ ರಿವೀಲ್ ಆಗಿದೆ. ರೇಣುಕಾಸ್ವಾಮಿಗೆ ಕೊಟ್ಟಿದ್ದ ಚಿತ್ರಹಿಂಸೆಯ ಎಳೆ ಎಳೆಯೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇದೆಲ್ಲದರ ಮಧ್ಯೆ ಡಿ ಗ್ಯಾಂಗ್ ಜೈಲಿನಿಂದ ಹೊರ ಬರುವ ಸಿದ್ಧತೆಯಲ್ಲಿ ತೊಡಗಿದೆ.
ಪರಪ್ಪನ ಅಗ್ರಹಾರದಿಂದ ಈಗಾಗಲೇ ದರ್ಶನ್ ಗ್ಯಾಂಗ್ ದಿಕ್ಕಾಪಾಲಾಗಿದ್ದು, ಆರೋಪಿಗಳು ರಾಜ್ಯದ ಬೇರೆ ಬೇರೆ ಜೈಲುಗಳಲ್ಲಿ ಕಂಬಿ ಎಣಿಸ್ತಿದ್ದಾರೆ. ಈ ಮಧ್ಯೆ ಆಗಸ್ಟ್ 28ರಂದು 24ನೇ ಎಸಿಎಂಎಂ ನ್ಯಾಯಾಲಯ ದರ್ಶನ್ ಗ್ಯಾಂಗ್‌ನ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಿತ್ತು. ಇಂದು ಆ ನ್ಯಾಯಾಂಗ ಬಂಧನ ಅವಧಿ ಅಂತ್ಯವಾಗಲಿದೆ. ಈ ಮಧ್ಯೆ ದರ್ಶನ್ ಗ್ಯಾಂಗ್ ಬೇಲ್‌ಗೆ ಅರ್ಜಿ ಸಲ್ಲಿಸಲು ಸಜ್ಜಾಗಿದೆ.
ದರ್ಶನ್ ಗ್ಯಾಂಗ್‌ನ ವಿವಿಧ ಜೈಲುಗಳಿಂದ ಇಂದು ಕೋರ್ಟ್‌ಗೆ ಹಾಜರಾಗಲಿದ್ದಾರೆ. 24ನೇ ACMM ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರೋಪಿಗಳನ್ನ ಪೊಲೀಸರು ಹಾಜರುಪಡಿಸಲಿದ್ದಾರೆ. ಇದರ ಜೊತೆಗೆ ಇಂದು ಆರೋಪಿಗಳ ಪರ ವಕೀಲರಿಗೆ ಚಾರ್ಜ್‌ಶೀಟ್ ಕೈ ಸೇರಲಿದೆ. ಚಾರ್ಜ್‌ಶೀಟ್ ಸಿಗುತ್ತಿದ್ದಂತೆ ದರ್ಶನ್ ಗ್ಯಾಂಗ್‌ನ ಕೆಲ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : ತುಮಕೂರಿನಲ್ಲಿ ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ – ಐವರು ದಾರುಣ ಸಾವು..!