Download Our App

Follow us

Home » ರಾಷ್ಟ್ರೀಯ » ಪತ್ರಕರ್ತರಿಗೆ ಬೆದರಿಕೆ ಹಾಕಿದರೆ ರೂ. 50,000 ದಂಡ, 3 ವರ್ಷ ಜೈಲು – ಪ್ರಧಾನಿ ಮೋದಿ..!

ಪತ್ರಕರ್ತರಿಗೆ ಬೆದರಿಕೆ ಹಾಕಿದರೆ ರೂ. 50,000 ದಂಡ, 3 ವರ್ಷ ಜೈಲು – ಪ್ರಧಾನಿ ಮೋದಿ..!

ಲಕ್ನೋ : ನಮ್ಮ ದೇಶದ ಪತ್ರಕರ್ತರೊಂದಿಗೆ ಅಸಭ್ಯವಾಗಿ ವರ್ತಿಸುವ ಅಥವಾ ಬೆದರಿಕೆ ಹಾಕಲು ಪ್ರಯತ್ನಿಸುವವರಿಗೆ ರೂ. 50 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಅಲಹಾಬಾದ್ ಹೈಕೋರ್ಟ್ ಪತ್ರಕರ್ತರ ಸುರಕ್ಷತೆಯ ವಿಚಾರವಾಗಿ ನೀಡಿರುವ ಹೇಳಿಕೆಯ ಪರವಾಗಿ ಭಾರತದಲ್ಲಿ ಪತ್ರಿಕೋದ್ಯಮವು ಬಿಕ್ಕಟ್ಟಿನ ಅವಧಿಯನ್ನು ಎದುರಿಸುತ್ತಿದೆ. ಸತ್ಯದ ಧ್ವನಿ ಎತ್ತುವ ಪತ್ರಕರ್ತರ ಮೇಲಿನ ಹಲ್ಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಪತ್ರಕರ್ತರ ಸುರಕ್ಷತೆ ವಿಚಾರದಲ್ಲಿ ಭಾರತ ಅತ್ಯಂತ ಅಪಾಯಕಾರಿ ರಾಷ್ಟ್ರಗಳ ಸ್ಥಾನದಲ್ಲಿದೆ. ದೇಶದಲ್ಲಿ ಪ್ರತಿ ವರ್ಷ ನೂರಾರು ಪತ್ರಕರ್ತರು ವರದಿ ಮಾಡುವಾಗ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸುದ್ದಿ ನೀಡುವ ವೇಳೆ ಪತ್ರಕರ್ತರನ್ನು ಬೆದರಿಸುವುದು ಸಾಮಾನ್ಯವಾಗಿದೆ. ಆದರೆ ಈಗ ಪತ್ರಕರ್ತರಿಗೆ ಇಂತಹ ಬೆದರಿಕೆ ಹಾಕುವವರು ಸುಸ್ಥಿತಿಯಲ್ಲಿಲ್ಲ. ಈಗ ಯಾರಾದರೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದರೆ ಜೈಲಿಗೆ ಹೋಗಬೇಕಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಪತ್ರಕರ್ತರನ್ನು ಬೆದರಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಬೆದರಿಕೆ ಆರೋಪದ ಮೇಲೆ ಬಂಧಿತರಾದವರಿಗೆ ಸುಲಭವಾಗಿ ಜಾಮೀನು ಸಹ ಸಿಗುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆದ್ದರಿಂದ ಪತ್ರಕರ್ತರ ಜೊತೆ ಯಾವುದೇ ರೀತಿಯ ಅಸಭ್ಯ ವರ್ತನೆ ಮಾಡಬೇಡಿ. ಪತ್ರಕರ್ತರಿಗೆ ಗೌರವ ಕೊಡುವ ಕೆಲಸ ಮಾಡಿ ಎಂದು ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ.

ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಮಾಧ್ಯಮದವರ ಮೇಲೆ ಯಾವುದೇ ರೀತಿಯ ಹಿಂಸಾಚಾರ ಅಥವಾ ಮಾಧ್ಯಮದವರ ಮತ್ತು ಮಾಧ್ಯಮ ಸಂಸ್ಥೆಗಳ ಆಸ್ತಿಪಾಸ್ತಿಗಳಿಗೆ ಹಾನಿಯಾದ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಯಾವುದೇ ಪತ್ರಕರ್ತರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೆ ಕೂಡಲೇ ಅವರನ್ನು ಸಂಪರ್ಕಿಸಿ ನಿಮಗೆ ಬೆದರಿಕೆ ಹಾಕುವವರನ್ನು 24 ಗಂಟೆಯೊಳಗೆ ಜೈಲಿಗೆ ಕಳುಹಿಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪತ್ರಕರ್ತರೊಂದಿಗೆ ಗೌರವಯುತವಾಗಿ ಮಾತನಾಡಿ, ಇದು ನಿಮಗೆ ದುಬಾರಿಯಾಗಬಹುದು ಎಂದು ಸಿಎಂ ಯೋಗಿ ಕಟ್ಟುನಿಟ್ಟಿನ ಧ್ವನಿಯಲ್ಲಿ ಕಡಕ್ ಆಗಿಯೇ ಹೇಳಿದರು.

ಇದನ್ನೂ ಓದಿ : ಸೆಪ್ಟೆಂಬರ್​ 15ರಂದು ಭೂಮಿ ಸರ್ವನಾಶ? NASAದಿಂದಲೇ ಮಹತ್ವದ ಮಾಹಿತಿ..!

Leave a Comment

DG Ad

RELATED LATEST NEWS

Top Headlines

BBK11: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’ – ಮೋಕ್ಷಿತಾ ಖಡಕ್​ ಮಾತಿಗೆ ಜಗದೀಶ್ ಪುಲ್​ ಸೈಲೆಂಟ್..!

ಬಿಗ್‌ ಬಾಸ್‌ ಮನೆ ಈಗ ರಣರಂಗವಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. 16 ಸ್ಪರ್ಧಿಗಳ ಮಧ್ಯೆ ಒಂಟಿ ಮನೆಯಲ್ಲಿ ಆಟ ಮುಂದುವರಿದಿದೆ. ಮೊದಲ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್

Live Cricket

Add Your Heading Text Here