Download Our App

Follow us

Home » ರಾಜ್ಯ » ಆಭರಣ ಪ್ರಿಯರಿಗೆ ಮತ್ತೆ ನಿರಾಸೆ : 71 ಸಾವಿರ ರೂ. ಗಡಿ ದಾಟಿದ ಚಿನ್ನದ ಬೆಲೆ, ದಾಖಲೆ ಪ್ರಮಾಣದ ಏರಿಕೆ…!

ಆಭರಣ ಪ್ರಿಯರಿಗೆ ಮತ್ತೆ ನಿರಾಸೆ : 71 ಸಾವಿರ ರೂ. ಗಡಿ ದಾಟಿದ ಚಿನ್ನದ ಬೆಲೆ, ದಾಖಲೆ ಪ್ರಮಾಣದ ಏರಿಕೆ…!

ಬೆಂಗಳೂರು : ಏಪ್ರಿಲ್‌ ತಿಂಗಳು ಆಭರಣ ಪ್ರಿಯರಿಗೆ ನಿಜಕ್ಕೂ ನಿರಾಸೆ ತಂದಿದೆ. ಏಕೆಂದರೆ ಈ ತಿಂಗಳ ಆರಂಭದಿಂದಲೂ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗುತ್ತಿದೆ. ಚಿನ್ನ ಹಾಗೂ ಬೆಳ್ಳಿಗೆ ಯಾವಾಗಲೂ ಬೆಲೆ ಹೆಚ್ಚು, ಅದರಲ್ಲೂ ಈ ವರ್ಷದಲ್ಲಿ ಚಿನ್ನ ಹಾಗೂ ಬೆಳ್ಳಿ ಹೊಸ ದಾಖಲೆ ಬರೆಯುತ್ತಿವೆ.

ಇದೀಗ, ಚಿನ್ನದ ಬೆಲೆ 71 ಸಾವಿರ ರೂ. ಗಡಿ ದಾಟಿದ್ದು, ಈ ಮೂಲಕ ಚಿನ್ನದ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಏಪ್ರಿಲ್‌ನಲ್ಲಿ ಮದುವೆ ಸಮಾರಂಭಗಳು, ಹಬ್ಬಗಳ ಸೀಸನ್. ಶುಭ ಸಮಾರಂಭಗಳಿಗೆ ಚಿನ್ನಾಭರಣವೂ ಅತೀ ಮುಖ್ಯ. ಹೀಗಿರುವಾಗ ಚಿನ್ನ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚು. ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹಿಂದಿಗಿಂತ ದುಬಾರಿಯಾಗಿದ್ದು, ಆಭರಣ ಪ್ರಿಯರಿಗೆ ನಿರಾಸೆಯಾಗಿದೆ.

ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 64,150 ರೂಪಾಯಿ ಇತ್ತು. ಆದರೆ ಇಂದು 65,350 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಗಿಂತ 1200 ರೂ. ಏರಿಕೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 69,980 ರೂಪಾಯಿ ಇತ್ತು. ಆದರೆ ಇಂದು 71,290ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆಗಿಂತ 1310 ರೂ. ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಹೀಗಿವೆ :

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ : 65,350 ರೂ.
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ : 71,290ರೂ.
  • ಬೆಳ್ಳಿ ಬೆಲೆ 1 ಕೆಜಿ: 82,000 ರೂ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 65,350ರೂ.
ಮುಂಬೈ: 65,350 ರೂ
ದೆಹಲಿ: 65,500 ರೂ.
ಕೇರಳ: 65,350ರೂ.
ಅಹ್ಮದಾಬಾದ್:65,400 ರೂ.
ಜೈಪುರ್: 65,500 ರೂ

ಇದನ್ನೂ ಓದಿ : ಎಲೆಕ್ಷನ್ ಹೊತ್ತಲ್ಲಿ ಪತ್ತೆಯಾದ ಕೋಟಿ, ಕೋಟಿ ಗೋಲ್ಡ್ : 15 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ..!

Leave a Comment

RELATED LATEST NEWS

Top Headlines

ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ : KSRTC ಬಸ್​ ಡ್ರೈವರ್​​ಗೆ ಚಾ*ಕುವಿನಿಂದ ಇರಿದ ಮಿನಿ ಟ್ರಕ್​​ ಡ್ರೈವರ್​​..!

ಬೆಂಗಳೂರು : ವಾಹನವನ್ನು ಓವರ್​ ಟೇಕ್​ ಮಾಡುವ ವಿಚಾರಕ್ಕೆ ಜಗಳ ನಡೆದು KSRTC ಬಸ್​ ಡ್ರೈವರ್​​ಗೆ ಮಿನಿ ಟ್ರಕ್​​ ಡ್ರೈವರ್ ​​ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ

Live Cricket

Add Your Heading Text Here