ಇತ್ತೀಚಿನ ದಿನಗಳಲ್ಲಿ ಕನ್ನಡ ಚಲನಚಿತ್ರರಂಗ ವಿಶ್ವ ಮಟ್ಟದ ಚಿತ್ರಗಳನ್ನು ಜಗತ್ತಿಗೆ ಕೊಡುತ್ತಿರುವ ಈ ಸಮಯದಲ್ಲಿ ಅತ್ತ್ಯುತ್ತಮ ಕಂಟೆಂಟ್ ಜೊತೆಗೆ ಮನಮೋಹಕ ಸಂಗೀತವಿರುವ ‘ಜಲಂಧರ’ ಚಲನಚಿತ್ರದ ಆಡಿಯೋ ಹಕ್ಕನ್ನು ಸ್ಯಾಂಡಲ್ವುಡ್ನ ಟಾಪ್ ಆಡಿಯೋ ಸಂಸ್ಥೆ ಜಂಕಾರ್ ಆಡಿಯೋ ಪಡೆದುಕೊಂಡಿದೆ.
ಸ್ಯಾಂಡಲ್ವುಡ್ನಲ್ಲಿ ತಮ್ಮದೇ ನಟನ ಶೈಲಿಯಲ್ಲಿ ಛಾಪು ಮೂಡಿಸಿರುವ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಸ್ಟೆಪ್ ಅಪ್ ಪಿಕ್ಚರ್ಸ್ ಲಾಂಛನದಲ್ಲಿ ಮದನ್ ಎಸ್ ನಿರ್ಮಿಸುತ್ತಿದ್ದಾರೆ. ಹೂಡಿ ಚಂದ್ರಮೋಹನ್, ಸಿ ಎಲ್ ರಮೇಶ್ ರಾಮಚಂದ್ರ , ಪದ್ಮನಾಭನ್ ಮಂಗುದೊಡ್ಡಿ ಸಹ ನಿರ್ಮಾಪಕರಾಗಿದ್ದಾರೆ.
ಇನ್ನು “ಜಲಂಧರ” ಚಿತ್ರಕ್ಕೆ ಹಲವು ಚಿತ್ರಗಳಲ್ಲಿ ಕ್ರಿಯೇಟಿವ್ ಹೆಡ್ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ವಿಷ್ಣು ವಿ ಪ್ರಸನ್ನ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಶ್ಯಾಮ್ ಸುಂದರ್ ಮತ್ತು ಅಕ್ಷಯ್ ಕುಮಾರ್ ಸಹಾಯ ಮಾಡಿದ್ದಾರೆ. ಕೇರಳ ಮೂಲದ ಸರಿನ್ ರವೀಂದ್ರನ್ ಮತ್ತು ವಿದ್ಯಾ ಶಂಕರ್ ಪಿ.ಎಸ್ ಛಾಯಾಗ್ರಹಣ ಹಾಗೂ ಯುವ ಸಂಗೀತ ನಿರ್ದೇಶಕ ಜಿ. ಜತಿನ್ ದರ್ಶನ್ ನಿರ್ದೇಶನ ಈ ಚಿತ್ರಕ್ಕಿದ್ದು ಅನುಭವಿ ಫಿಲಂ ಎಡಿಟರ್ ವೆಂಕಿ ಯು ಡಿ ವಿ ಕತ್ತರಿ ಪ್ರಯೋಗ ಮಾಡಿದ್ದಾರೆ .
ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರದ ಪ್ರಮುಖಪಾತ್ರದಲ್ಲಿ ರಂಗಭೂಮಿಯ ಹಿನ್ನೆಲೆ ಇರುವ ಸ್ಟೆಪ್ ಅಫ್ ಲೋಕಿ ಅಭಿನಯಿಸಿದ್ದಾರೆ. ಲೋಕಿ ಅವರೆ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಜೊತೆಗೆ “ಟಗರು” ಚಿತ್ರದಲ್ಲಿ ಕಾನ್ ಸ್ಟೇಬಲ್ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಸರೋಜಾ ಖ್ಯಾತಿಯ ನಟಿ ಋಷಿಕಾ ರಾಜ್, “ಅಧ್ಯಕ್ಷ” ಖ್ಯಾತಿಯ ನಟಿ ಆರೋಹಿತಾ ಗೌಡ , ಬಲ ರಾಜ್ ವಾಡಿ, ರಘು ರಾಮನಕೊಪ್ಪ , ನವೀನ್ ಸಾಗರ್, ಪ್ರತಾಪ್ ನನಸು, ಆದಿ ಕೇಶವರೆಡ್ಡಿ, ಭೀಷ್ಮಾ ರಾಮಯ್ಯ , ವಿಜಯರಾಜ್ , ಪ್ರಸಾದ್ ಮತ್ತು ಅಂಬು “ಜಲಂಧರ್” ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ : ಯುವ ದಸರಾದಲ್ಲಿ ಅದ್ದೂರಿಯಾಗಿ ನೆರವೇರಿತು ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ಸಂಜೆ..!