ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್ ರೌಡಿಶೀಟರ್ ಜೊತೆ ಸೇರಿ ವಿಡಿಯೋ ಕಾಲ್‌ನಲ್ಲಿ ಮಾತನಾಡಿರೋ ವಿಡಿಯೋ ವೈರಲ್ ಆಗಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಮಗ ಸತ್ಯನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಜೈಲಿಂದಲೇ ವಿಡಿಯೋ ಕಾಲ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಜೈಲಿನಲ್ಲಿರುವ ಮಾರ್ಕೆಟ್ ಧರ್ಮ, ಮಾಜಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ದನ್ ಮಗ ಸತ್ಯನಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಈ ವೇಳೆ ಸತ್ಯನ ಜೊತೆ ಮಾತಾಡಲು ದರ್ಶನ್‌ಗೆ ಧರ್ಮ ಫೋನ್ ನೀಡಿದ್ದಾನೆ. ಅದರಲ್ಲಿ ಸತ್ಯನೊಂದಿಗೆ ಕೊಲೆ ಆರೋಪಿ ದರ್ಶನ್ ಮಾತನಾಡಿದ್ದಾರೆ. ಈ ವಿಡಿಯೋ ಎಲ್ಲಡೆ ಬಾರಿ ವೈರಲ್ ಆಗಿತ್ತು.
ಇದೀಗ ದರ್ಶನ್ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದ ಮಾಜಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ದನ್ ಮಗ ಸತ್ಯನನ್ನು ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : KWPL ಸೀಸನ್ 3ರ ಟ್ರೋಫಿ ಅನಾವರಣಗೊಳಿಸಿದ ಶಾಸಕ ಅಶ್ವಥ್ ನಾರಾಯಣ..!