ಬೆಂಗಳೂರು : ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿರೋ ಜೈ ಹನುಮಾನ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ವಿವಾದಕ್ಕೆ ಸಿಲುಕಿದೆ. ಹನುಮಂತನ ಮುಖದ ಬದಲು ರಿಷಬ್ ಶೆಟ್ಟಿ ಮುಖ ತೋರಿಸಿರೋದು ತಪ್ಪು, ಇದು ಹನುಮಂತನಿಗೆ ಮಾಡೋ ಅಪಮಾನ ಅಂತ ವಕೀಲರೊಬ್ಬರು ಕೇಸ್ ದಾಖಲಿಸಿದ್ದಾರೆ.
ಇದೀಗ ರಿಷಬ್ ಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಜೈ ಹನುಮಾನ್ ಸಿನಿಮಾದ ಫಸ್ಟ್ ಲುಕ್ ವಿರುದ್ಧ ಆಂಧ್ರ ಮೂಲದ ಮಮಿಡಾಲ್ ತಿರುಮಲಾ ರಾವ್ ಎಂಬುವವರು ದೂರು ನೀಡಿದ್ದಾರೆ. ಮುಂದಿನ ಜನರೇಷನ್ಗೆ ಒಳ್ಳೆಯ ಪಾಠ ಆಗ್ಬೇಕು.. ಅದು ಹೊರತು ಪಡಿಸಿ, ದುಡ್ಡಿಕೋಸ್ಕರ ಏನೇನೋ ತೋರಿಸೋದಲ್ಲ. ಪ್ರಾಪರ್ ಆಗಿ ಆಂಜನೇಯನ ತೋರಿಸಿ ಅಂತಾ ಅಹವಾಲು ಹಾಕಿದ್ದಾರೆ. ಈ ಸಂಬಂಧ ಇದೀಗ ಮೈತ್ರಿ ಮೂವಿ ಮೇಕರ್ಸ್, ರಿಷಬ್ ಶೆಟ್ಟಿ, ಪ್ರಶಾಂತ್ ವರ್ಮಾ ವಿರುದ್ಧ ದೂರು ದಾಖಲಾಗಿದೆ.
2024ರಲ್ಲಿ ಹನುಮಾನ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಕಂಡಿತ್ತು. ಬಳಿಕ ಈ ಸಿನಿಮಾದ ಬಹು ನಿರೀಕ್ಷಿತ ಸೀಕ್ವೆಲ್ ಆಗಿ ಜೈ ಹನುಮಾನ್ ಸಿನಿಮಾ ಮಾಡಲು ಮೈತ್ರಿ ಮೂವಿ ಮೇಕರ್ಸ್ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ, ತೇಜ ಸಜ್ಜಾ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ ಪ್ರಮುಖರು ತಾರಾಗಣದಲ್ಲಿದ್ದು, ಇದೀಗ ಈ ಚಿತ್ರಕ್ಕೆ ಬಿಡುಗಡೆಗೂ ಮೊದಲೇ ವಿಘ್ನ ಎದುರಾಗಿದೆ.
ಇದನ್ನೂ ಓದಿ : ವಿವಾಹಿತ ಮಹಿಳೆ ಜೊತೆ ಪ್ರೀತಿ – ನಿನ್ನೆ ಪ್ರಿಯಕರ, ಇಂದು ಪ್ರೇಯಸಿ ಆತ್ಮಹತ್ಯೆ..!