Download Our App

Follow us

Home » ಅಂತಾರಾಷ್ಟ್ರೀಯ » ಹಿಜ್ಬುಲ್ಲಾ ಉಗ್ರರ ಮೇಲಿನ ದಾಳಿಗೆ ಪ್ರತಿದಾಳಿ – ಇಸ್ರೇಲ್​ ಮೇಲೆ 100 ಕ್ಷಿಪಣಿಗಳಿಂದ ಇರಾನ್ ಭಯಾನಕ​ ಅಟ್ಯಾಕ್..!

ಹಿಜ್ಬುಲ್ಲಾ ಉಗ್ರರ ಮೇಲಿನ ದಾಳಿಗೆ ಪ್ರತಿದಾಳಿ – ಇಸ್ರೇಲ್​ ಮೇಲೆ 100 ಕ್ಷಿಪಣಿಗಳಿಂದ ಇರಾನ್ ಭಯಾನಕ​ ಅಟ್ಯಾಕ್..!

ಇಸ್ರೇಲ್ : ಇರಾನ್ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಜೋರಾಗಿದೆ. ನಿನ್ನೆ ಇಸ್ರೇಲ್ ಮೇಲೆ ಇರಾನ್ ಭೀಕರ ದಾಳಿ ನಡೆಸಿದ್ದು, ಯುದ್ಧ ಭೀತಿ ನಿರ್ಮಾಣವಾಗಿದೆ. ಇರಾನ್​ ಇಸ್ರೇಲ್ ಮೇಲೆ ಬರೋಬ್ಬರಿ 100ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ, ಬಾಂಬ್​​ಗಳನ್ನು ಉಡಾಯಿಸಿ ಭೀಕರ ಅಟ್ಯಾಕ್ ಮಾಡಿದೆ.

ದೇಶದ ಪ್ರಮುಖ ನಗರಗಳಾದ ಇಸ್ಫಹಾನ್, ತಬ್ರಿಜ್, ಖೋರಮಾಬಾದ್​​ನಿಂದ ಇಸ್ರೇಲ್‌ ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿದೆ. ಹಿಜ್ಬುಲ್ಲಾ ಉಗ್ರರ ಮೇಲಿನ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಸದ್ಯ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್​ & ಇರಾನ್ ನಡುವೆ ಯುದ್ಧ ಭೀತಿ ನಿರ್ಮಾಣವಾಗಿದೆ. ಇಸ್ರೇಲ್​​​ನ ಕಟ್ಟಡಗಳ ಮೇಲೆ ರಾಕೆಟ್​ಗಳ ದಾಳಿ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸೈರನ್​ ಮೊಳಗಿಸುವ ಮೂಲಕ ಇಸ್ರೇಲ್​ ಎಚ್ಚರಿಕೆ ನೀಡಿದೆ. ಜನ ಬಂಕರ್​ ಮತ್ತು ಶೆಲ್ಟರ್​ಗಳ ಮೊರೆ ಹೋಗಿದ್ದಾರೆ.

ಇತ್ತೀಚೆಗಷ್ಟೇ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ನಿರ್ಧಾರವನ್ನು ಇರಾನ್‌ ಮಾಡಿತ್ತು. ಇರಾನ್ ಅಧ್ಯಕ್ಷ, ​ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ನಿರ್ಧಾರದ ಬಳಿಕ ನಡೆದ ಮೊದಲ ಕ್ಷಿಪಣಿ ದಾಳಿ ಇದಾಗಿದೆ ಎಂದು ವರದಿಯಾಗಿದೆ. ಇಸ್ರೇಲ್​ ಮೇಲೆ ಇರಾನ್ ದಾಳಿಗೆ ಅಮೆರಿಕ ಕಿಡಿ ಕಾರಿದ್ದು, ಇಸ್ರೇಲ್​ಗೆ ನೆರವು ನೀಡುವಂತೆ ಸೇನೆಗೆ ಬೈಡನ್​ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಮುಡಾ ದೂರುದಾರ ಸ್ನೇಹಮಯಿ ಕೃಷ್ಣಗೆ ಸಂಕಷ್ಟ – ಜಾಮೀನು ರಹಿತ ಅರೆಸ್ಟ್ ವಾರೆಂಟ್‌ ಹೊರಡಿಸಿದ ಕೋರ್ಟ್..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here