ದೇವಸ್ಥಾನಗಳಲ್ಲಿ ಹುಂಡಿಗಳಿಗೆ ದುಡ್ಡು ಬಿಟ್ಟರೆ ಚಿನ್ನ ಬೆಳ್ಳಿ ಹಾಕುತ್ತಾರೆ. ಇತ್ತೀಚಿನಿಂದ ಭಕ್ತರು ಹುಂಡಿಗೆ ಪತ್ರ ಬರೆದು ಹಾಕುತ್ತಿರುವುದು ಹೆಚ್ಚಾಗುತ್ತಿದೆ. ಆದರೆ ಇಲ್ಲೊಬ್ಬ ಭಕ್ತನ ಐಪೋನ್ ಆಕಸ್ಮಿಕವಾಗಿ ಹುಂಡಿಗೆ ಬಿದ್ದಿದೆ. ಇದೀಗ ದೇವಸ್ಥಾನ ಹುಂಡಿಯಲ್ಲಿರುವ ಎಲ್ಲಾ ವಸ್ತುಗಳು ದೇವಸ್ಥಾನದ ಆಸ್ತಿ ಎಂದು ವಾಪಾಸ್ ನೀಡಲು ನಿರಾಕರಿಸಿದ ಘಟನೆ ತಮಿಳುನಾಡಿನ ದೇವಸ್ಥಾನ ಒಂದರಲ್ಲಿ ನಡೆದಿದೆ.
ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪೊರೂರ್ನ ಪ್ರಸಿದ್ಧ ಕಂದಸ್ವಾಮಿ ದೇವಾಲಯಕ್ಕೆ ಭಕ್ತ ದಿನೇಶ್ ಎನ್ನುವರು ಭೇಟಿ ಕೊಟ್ಟಿದ್ದರು. ಈ ವೇಳೆ ಹುಂಡಿಗೆ ಭಕ್ತನ ಐಫೋನ್ ಆಕಸ್ಮಿಕವಾಗಿ ಬಿದ್ದಿದೆ. ಈ ಘಟನೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಭಕ್ತ, ಐಫೋನ್ ಬಿದ್ದಿದೆ ಎಂದು ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಹುಂಡಿ ಓಪನ್ ಮಾಡಿದ್ದು ಐಫೋನ್ ಕೂಡ ಸಿಕ್ಕಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಐಫೋನ್ನ್ನು ಭಕ್ತನಿಗೆ ವಾಪಸ್ ನೀಡಲು ನಿರಾಕರಿಸಿದೆ. ಹುಂಡಿಯಲ್ಲಿ ಬಿದ್ದಿದ್ದು, ದೇವಸ್ಥಾನಕ್ಕೆ ಸ್ವಂತ ಎಂದು ಆಡಳಿತ ಮಂಡಳಿ ಹೇಳಿದೆ.
ಇನ್ನು ಮೊಬೈಲ್ನಲ್ಲಿರುವ ಡಾಟಾವನ್ನು ಬೇಕಾದರೆ ಕೊಡುತ್ತಿವೆ. ಆದರೆ ಐಫೋನ್ನ್ನು ವಾಪಸ್ ಕೊಡುವುದಿಲ್ಲ. ನಿಮ್ಮದು ಏನೇ ಇದ್ದರು ಹುಂಡಿ ಎಣಿಕೆ ಸಮಯದಲ್ಲಿ ಬಂದು ಹೇಳಿಕೊಳ್ಳಬಹುದು. ಅಲ್ಲಿವರೆಗೆ ಐಫೋನ್ ದೇವಾಲಯಕ್ಕೆ ಸೇರಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇದರಿಂದ ಭಕ್ತ ದಿನೇಶ್ ಅಚ್ಚರಿಗೊಂಡಿದ್ದಾರೆ.
ಇದನ್ನೂ ಓದಿ : ಕೋಟಿ-ಕೋಟಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ – ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಅರೆಸ್ಟ್..!