ಬೆಂಗಳೂರು : ಖಾಸಗಿ ವಿಧಿ ವಿಜ್ಞಾನ ಪ್ರಯೋಗಾಲಯದವರು (FSL) ಯಾರ ಅನುಮತಿ ತೆಗೆದುಕೊಂಡು ಧ್ವನಿ ಪರೀಕ್ಷೆ ಮಾಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಪ್ರಶ್ನೆ ಮಾಡಿದ್ದಾರೆ.
ಗೃಹ ಸಚಿವ ಜಿ.ಪರಮೇಶ್ವರ್ ಅವರು ಖಾಸಗಿ ಸಂಸ್ಥೆಯ FSL ವರದಿ ವಿಚಾರ ಕುರಿತು ಮತನಾಡಿ, ಖಾಸಗಿ ವರದಿ ನಾವು ಗಣನೆಗೆ ತೆಗೆದುಕೊಳ್ಳಲ್ಲ. ಗೃಹ ಇಲಾಖೆ ಹಾಗೂ ಕೇಂದ್ರದಿಂದ ವರದಿ ನೀಡಬೇಕು. ಇದರಲ್ಲಿ ಮುಚ್ಚು ಮರೆ ಮಾಡುವ ಅಗತ್ಯ ಇಲ್ಲ. ಖಾಸಗಿಯವರಿಗೆ ಪರ್ಮಿಷನ್ ಇದ್ಯಾ? ಅನುಮತಿ ನೀಡಿದ್ಯಾರು? ಎಂದು ಗೃಹ ಸಚಿವ ಪರಮೇಶ್ವರ್ ಗರಂ ಆಗಿದ್ದಾರೆ.
ಖಾಸಗಿ ಸಂಸ್ಥೆಯ FSL ರಿಪೋರ್ಟ್ ನಲ್ಲಿ ಪಾಕ್ ಘೋಷಣೆ ದೃಢ ಎನ್ನಲಾಗಿತ್ತು. ಈ ಬಗ್ಗೆ ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಖಾಸಗಿ ಸಂಸ್ಥೆಯ FSL ವರದಿ ಬಹಿರಂಗಪಡಿಸಿತ್ತು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಸರ್ಕಾರದ ವರದಿ ಇನ್ನು ಬರಬೇಕಿದೆ. ಖಾಸಗಿ ವರದಿ ನಂಬೋದಿಲ್ಲ ಎಂದು ಹೇಳಿದ್ದಾರೆ. ಖಾಸಗಿ ಸಂಸ್ಥೆಗೆ ಯಾರಾದ್ರೂ NOC ಕೊಟ್ಟಿದಾರಾ? ಖಾಸಗಿ ವರದಿ ಬಹಿರಂಗ ಮಾಡಬಹುದಾ ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರವನ್ನು ಸರ್ಕಾರ ಮುಚ್ಚಿಡುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ, ಎಫ್‌ಎಸ್‌ಎಲ್ ವರದಿಯನ್ನು ಮುಚ್ಚಿಡುವಂತಹ ಪ್ರಶ್ನೆಯೇ ಇಲ್ಲ. ವರದಿ ಬಂದ ಕೂಡಲೇ ಪ್ರಕಟ ಮಾಡುತ್ತೇವೆ. ಘೋಷಣೆ ಕೂಗಿದ್ದು ನಿಜವಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ. ಭಾನುವಾರ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲೂ ಸಹ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ : ಮಂಗಳೂರು : ಕಾಲೇಜು ಆವರಣದಲ್ಲಿಯೇ ಮುಸುಕುಧಾರಿ ಯುವಕರಿಂದ ಮೂವರು ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ..!