ಬೆಂಗಳೂರು : ಮುಡಾ, ವಾಲ್ಮೀಕಿ ಹಗರಣ ಅಸ್ತ್ರ ಹಿಡಿದ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್ ಕೊಟ್ಟಿದ್ದು, ಬಿಜೆಪಿ ಅವಧಿಯಲ್ಲಿ ನಡೆದಿರುವ 21 ಹಗರಣಗಳ ತನಿಖೆಗೆ SIT ರಚನೆ ಮಾಡಿ ಇಂದೇ ಆದೇಶ ಹೊರಡಿಸುವ ಸಾಧ್ಯತೆಯಿದೆ. ಈ ಮೂಲಕ ಬಿಜೆಪಿ ಕೊಟ್ಟ ಎರಡೇಟಿಗೆ ಸಿದ್ದು 22 ಏಟು ಹಿಂದಿರುಗಿಸಿ ಕೊಟ್ಟಿದ್ದಾರೆ.
ಇದೀಗ ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, “ತನಿಖೆ ಮಾಡ್ಬೇಡಿ ಅಂತಾ ನಿಮ್ಮನ್ನು ಯಾರು ತಡೆದಿದ್ದಾರೆ? ನಮ್ಮ ಕಾಲದಲ್ಲಿ ಹಗರಣ ಆಗಿದ್ರೆ ತನಿಖೆ ಮಾಡಿ ಬೇಡ ಅಂದೋರ್ಯಾರು, ಯಾವ ಸಂದರ್ಭದಲ್ಲಿ ಯಾರ ಇಲಾಖೆಯಲ್ಲಿ ಆಗಿದ್ರೂ ತನಿಖೆ ಮಾಡಿ” ಎಂದು ತಿರುಗೇಟು ನೀಡದ್ದಾರೆ.
ಚಿತ್ರದುರ್ಗದಲ್ಲಿ ಈ ಬಗ್ಗೆ ಮಾತನಾಡಿ, ಮುಖ್ಯಮಂತ್ರಿಗಳೇ ನಾವು ಎತ್ತಿರೋ ಪ್ರಶ್ನೆ ಇದಲ್ಲ. ಮೊದಲು ನಿಮ್ಮ ಸರ್ಕಾರದ ಹಗರಣಗಳ ಬಗ್ಗೆ ಉತ್ತರ ಕೊಡಿ. ನಮಗೆ ಬೆದರಿಕೆ ಹಾಕುವ ಅವಶ್ಯಕತೆ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ : ದರ್ಶನ್ ಜೊತೆ ಜೈಲು ಸೇರಿದ್ದ 4ನೇ ಆರೋಪಿ ರಘು ತಾಯಿ ನಿಧನ..! –