ಬೆಂಗಳೂರು : ಕಂಪನಿ ಲೋಗೋ ಮತ್ತು ಎಂ.ಡಿ ಡಿಪಿ ಬಳಸಿ ವಂಚನೆ ಮಾಡುತ್ತಿದ್ದ ಗ್ಯಾಂಗ್ನ್ನು ಆಗ್ನೇಯ ವಿಭಾಗ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್ನಲ್ಲಿ ಆರೋಪಿಗಳು ಖಾಸಗಿ ಕಂಪನಿಯ ಎಂ.ಡಿ ಹೆಸರಲ್ಲಿ ವಂಚಿಸಿದ್ದು, ಆರು ಅಂತರರಾಜ್ಯ ವಂಚಕರನ್ನು ಅರೆಸ್ಟ್ ಮಾಡಲಾಗಿದೆ.
ತಾವೇ ಎಂ.ಡಿ ಎಂದು ನಂಬಿಸಿ ಅವರ ಡಿಪಿ ಬಳಸಿ ಆ ಕಂಪನಿಯ ಅಕೌಂಟೆಂಟ್ನಿಂದ 56 ಲಕ್ಷ ಹಣ ಕಳಿಸಿಕೊಂಡಿದ್ದರು. ನಂತರ ಆರೋಪಿಗಳು ಇದನ್ನ ಕ್ರಿಪ್ಟೋ ಕರೆನ್ಸಿಗೆ ಬದಲಾಯಿಸಿದ್ದಾರೆ. ಆರೋಪಿಗಳು ಹೈದರಾಬಾದ್ ಮೂಲದವರು ಎಂಬುದು ತಿಳಿದುಬಂದಿದೆ.
ಅಷ್ಟೇ ಅಲ್ಲದೆ ಆರೋಪಿಗಳು ಸಿಎ ಇಂಟರ್ನಿಗಳಾಗಿ ಕೆಲಸ ಮಾಡುತ್ತಿದ್ದು, ಆರೋಪಿಗಳಿಂದ ಒಂದು ಆಡಿ ಕಾರು, ಐದು ಲಕ್ಷ 60 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ : ನನ್ನ ಜೀವನದ ಕೆಟ್ಟ ಚಿತ್ರವೆಂದರೆ ಅದು ಬಾಲಯ್ಯ ಜೊತೆಗಿನ ಸಿನಿಮಾ – ಅನುಷ್ಕಾ ಶೆಟ್ಟಿ..!
Post Views: 172