ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಈಗ 3 ವರ್ಷ ಕಳೆದಿದೆ. ಅಪ್ಪು ಸರ್ ಅಕ್ಟೋಬರ್ 29, 2021 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು. ಈ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಆಪ್ತರನ್ನ, ಸ್ನೇಹಿತರನ್ನ ಹಾಗೂ ದೊಡ್ಡ ಫ್ಯಾಮಿಲಿಯನ್ನ ಅಗಲಿದ್ದಾರೆ. ಆದರೆ ಇಂದಿಗೂ ಭಾರತದಲ್ಲಿ ಮೂಲೆ ಮೂಲೆಯಲ್ಲೂ ಡಾ. ರಾಜ್ & ಪುನೀತ್ ರಾಜ್ ಇಬ್ಬರೂ ಚಿರಪರಿಚಿತ ಆಗೋಗಿದ್ದಾರೆ. ಇದೀಗ ಪುನೀತ್ ರಾಜ್‌ಕುಮಾರ್ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು ಇಲ್ಲಿವೆ ನೋಡಿ..
ಅಪ್ಪು ಅಂದ್ರೆ ಈಗಿನ್ನು ಹುಟ್ಟಿರುವ ಮಗುವಿನಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಇಷ್ಟ. ಯಾಕೆ ಅಂದ್ರೆ ಬೆಟ್ಟದ ಹೂವು ಸಿನಿಮಾದಿಂದ ಹಿಡಿದು ಗಂಧದ ಗುಡಿ ತನಕ ಈ ನಟನ ಸಾಧನೆಗೆ ಈ ಭೂಮಿ ಮೇಲೆ ಯಾರೂ ಸಾಟಿ ಇಲ್ಲ. ಪುನೀತ್ ರಾಜ್‌ಕುಮಾರ್ ಸಿನಿ ಜೀವನದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ತುಂಬಾನೆ ಮುಖ್ಯ ಪಾತ್ರವಹಿಸಿದ್ದಾರೆ. ಪುನೀತ್ ಸಿನಿಮಾಗಳ ಕಥೆ ಆಯ್ಕೆಗಳಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಕೂಡ ಇರ್ತಾ ಇದ್ದರು. ಹಾಗೆ ಹಲವಾರು ಸಿನಿಮಾಗಳು ಹಿಟ್ ಕೂಡ ಆಗಿವೆ.
ಪುನೀತ್ ರಾಜ್‌ಕುಮಾರ್ ಅಭಿನಯದ ಬಹುತೇಕ ಸಿನಿಮಾಗಳು ಪರ ಭಾಷೆಗೆ ರೀಮೇಕ್ ಆಗಿವೆ. ಅದಕ್ಕೆ ಉದಾಹರಣ ಕೊಡೋದಾದ್ರೆ, ಅಪ್ಪು ಮತ್ತು ಅಭಿ ಸಿನಿಮಾಗಳು ತೆಲಗು ಭಾಷೆಗೆ ರೀಮೇಕ್ ಆಗಿವೆ. ತೆಲುಗು ಈಡಿಯೆಟ್ ಚಿತ್ರ ಪುನೀತ್ ಅಭಿನಯದ ಅಪ್ಪು ಚಿತ್ರದ ರೀಮೇಕ್ ಆಗಿದೆ.ತೆಲುಗು ಭಾಷೆಯಲ್ಲಿ ಬಂದ ಅಭಿಮನ್ಯು ಕೂಡ ರಿಮೇಕ್ ಚಿತ್ರವೇ ಆಗಿದೆ. ಪುನೀತ್ ಅಭಿನಯದ ಅಭಿ ಚಿತ್ರದ ರಿಮೇಕ್ ಈ ಅಭಿಮನ್ಯು ಅಂತಲೇ ಹೇಳಬಹುದು. ಈ ರೀತಿ ಪುನೀತ್ ಅಭಿನಯದ ಸುಮಾರು ಚಿತ್ರಗಳು ಪರ ಭಾಷೆಯಲ್ಲಿ ರೀಮೇಕ್ ಆಗಿವೆ ನೊಡಿ.
ಅಷ್ಟೇ ಅಲ್ಲದೆ, ಪುನೀತ್ ರಾಜ್‌ಕುಮಾರ್ ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆದ ಸೂಪರ್ ಸ್ಟಾರ್ ಆಗಿದ್ದರು. ಕನ್ನಡದಲ್ಲಿ ಪುನೀತ್ ಒಬ್ಬರೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಅನ್ನುವ ಮಾಹಿತಿ ಸಿಗುತ್ತಿದೆ. ಪುನೀತ್ ಹಿಟ್ ಮೇಲೆ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ. ಈ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆದ ಕನ್ನಡದ ನಟ ಅಂತಲೂ ಕರೆಸಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ತಂದೆ ರಾಜ್‌ಕುಮಾರ್ ಅಭಿನಯದ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಕನ್ನಡ ಸಿನಿ ಪ್ರೇಮಿಗಳನ್ನ ರಂಜಿಸುತ್ತಲೇ ಬಂದಿದ್ದರು. ಬೆಟ್ಟದ ಹೂ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಎಲ್ಲರಿಗೂ ಗೊತ್ತಿರೋ ಹಾಗೆ ಪುನೀತ್ ಒಬ್ಬ ಒಳ್ಳೆ ಸಿಂಗರ್ ಕೂಡ ಆಗಿದ್ದರು. ಹಾಡಿನಿಂದ ಬರೋ ದುಡ್ಡನ್ನ ಪುನೀತ್ ಒಳ್ಳೆ ಕೆಲಸಕ್ಕೆ ಬಳಸುತ್ತಿದ್ದರು. ತಮ್ಮ ಸಂಭಾವನೆಯಲ್ಲಿ ಒಂದಷ್ಟು ಚಾರಿಟಿಗಳಿಗೂ ಕೊಡ್ತಾ ಇದ್ದರು.
ಇನ್ನು ಪುನೀತ್ ರಾಜ್‌ಕುಮಾರ್ ಒಬ್ಬ ಫ್ಯಾಮಿಲಿ ಮ್ಯಾನ್ ಕೂಡ ಆಗಿದ್ದರು. ಪತ್ನಿ ಮಕ್ಕಳು ಹೀಗೆ ಇವರಿಗೆ ಹೆಚ್ಚು ಸಮಯ ಕೊಡುತ್ತಿದ್ದರು. ಮಹಿಳಾ ದಿನದಂದು ಪತ್ನಿಗೆ ದುಬಾರಿ ಕಾರ್ ಗಿಫ್ಟ್ ಕೂಡ ಕೊಟ್ಟಿದ್ದರು. ಪುನೀತ್ ಬಳಿ ಒಳ್ಳೆ ಕಾರ್‌ಗಳು ಕೂಡ ಇವೆ. ಅವುಗಳನ್ನ ಆಗಾಗ ಡ್ರೈವ್ ಕೂಡ ಮಾಡ್ತಿದ್ದರು.
ಇದನ್ನೂ ಓದಿ : ಬೆಂಗಳೂರಲ್ಲಿ ಕಿಡಿಗೇಡಿಗಳ ಅಟ್ಟಹಾಸ – ಮನೆ ಮುಂದೆ ನಿಲ್ಲಿಸಿದ ಕಾರು ಜಖಂಗೊಳಿಸಿ ವ್ಯಕ್ತಿ ಮೇಲೆ ಹಲ್ಲೆ..!