Download Our App

Follow us

Home » ಅಪರಾಧ » ಹಣ ದುರ್ಬಳಕೆ ಆರೋಪ – ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸುತ್ತಿದ್ದಂತೆ ಇನ್ಸ್​ಪೆಕ್ಟರ್​​ ಶಂಕರ್ ನಾಯ್ಕ್ ಎಸ್ಕೇಪ್..!

ಹಣ ದುರ್ಬಳಕೆ ಆರೋಪ – ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸುತ್ತಿದ್ದಂತೆ ಇನ್ಸ್​ಪೆಕ್ಟರ್​​ ಶಂಕರ್ ನಾಯ್ಕ್ ಎಸ್ಕೇಪ್..!

ಬೆಂಗಳೂರು : ಇನ್ಸ್​ಪೆಕ್ಟರ್​​​ ಶಂಕರ್​​ನಾಯಕ್​​​​​​​ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಶಂಕರ್ ನಾಯ್ಕ್ ವಿರುದ್ದದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವಾಗುತ್ತಿದ್ದಂತೆ ಸಿಸಿಬಿ ತಂಡ ಶಂಕರ್​​ನಾಯ್ಕ್​ಗೆ ಶೋಧ ನಡೆಸುತ್ತಿದೆ. ಇನ್ಸ್​ಪೆಕ್ಟರ್​​​ ಶಂಕರ್​ನಾಯಕ್ ಬಿಡದಿ ಠಾಣೆಯಿಂದ ಮೊಬೈಲ್ ಸ್ವಿಚ್​ಆಫ್ ಮಾಡಿಕೊಂಡು ​ಪರಾರಿಯಾಗಿದ್ದಾರೆ.

ಶಂಕರ್​​ನಾಯ್ಕ್ ಕರ್ತವ್ಯದ ವೇಳೆ ಕಳ್ಳತನ ಕೇಸ್​ನಲ್ಲಿ 72 ಲಕ್ಷ  ಜಪ್ತಿ ಮಾಡಿದ್ದರು, ಹಣವನ್ನು ಸರ್ಕಾರದ ಖಜಾನೆ ಅಥವಾ ಠಾಣೆ ಸುಪರ್ದಿಗೆ ಕೊಡದೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ACP ಭರತ್ ರೆಡ್ಡಿ ದೂರು ಆಧರಿಸಿ 2023ರ ನವೆಂಬರ್​ನಲ್ಲಿ FIR ದಾಖಲಾಗಿತ್ತು. ಶಂಕರ್ ನಾಯ್ಕ್ ಅವರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಕೆಲ ದಿನಗಳ ಹಿಂದೆ ಪ್ರಕರಣ ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿತ್ತು. ಇದೀಗ ಬಂಧನ ಭೀತಿಯಿಂದ ಇನ್ಸ್​ಪೆಕ್ಟರ್​​ ಶಂಕರ್ ನಾಯ್ಕ್ ತಲೆಮರೆಸಿಕೊಂಡಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಪೊಲೀಸ್​ ಕಮಿಷನರ್ ಸಿಸಿಬಿಗೆ ವಹಿಸಿದ್ದರು. ಹೈಕೋರ್ಟ್​ ಪ್ರಕರಣದ ತನಿಖೆಗೆ ತಡೆ ನೀಡಿತ್ತು, ಆದರೆ ತಡೆಯಾಜ್ಞೆ ತೆರವುಗೊಳಿಸುವಂತೆ ಸಿಸಿಬಿ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ ಆದೇಶ ನೀಡಿದ ಬೆನ್ನಲ್ಲೇ ಬಂಧನ ಭೀತಿಯಿಂದ ಇನ್ಸ್​ಪೆಕ್ಟರ್​ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ : ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ಸೆಕ್ಸ್ ಸ್ಕ್ಯಾಂಡಲ್ ​​- ಇದು ಬಣ್ಣದ ಲೋಕವೇ ಬೆಚ್ಚಿ ಬೀಳೋ ಸ್ಪೋಟಕ ಸುದ್ದಿ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here